ಚಳ್ಳಕೆರೆ : ಕುರಾನ್ ಬೈಬಲ್ ಮತ್ತು ಭಗವದ್ಗೀತೆಗಳಲ್ಲಿ ಹೇಳಿರುವುದು ಒಂದೇ ಅಸಹಾಯಕರ ಶೋಷಿತರ ಮತ್ತು ಧ್ವನಿ ಇಲ್ಲದವರಿಗೆ ನೆರವಾಗುವುದು ಸತ್ಯ ನ್ಯಾಯ ಮತ್ತು ಕರ್ಮಗಳು ಸರ್ವಕಾಲಿಕವಾದವು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಅವರು ನಗರದ ಚರ್ಚ್ ಆವರಣದಲ್ಲಿ ಕ್ರಿಸ್ಮಸ್‌ಗೆ ಪೂರ್ವಭಾವಿಯಾಗಿ ಸೌಹಾರ್ದ ಸಭೆಯಲ್ಲಿ ಮಾತನಾಡಿ ಶ್ರೀ ಕೃಷ್ಣನಾ ಕರ್ಮಣ್ಯ ವಾದಿಕಾರಸ್ತು ಇಡೀ ವಿಶ್ವಕ್ಕೆ ನೀತಿ ಪಾಠ ಸಮಾಜದಲ್ಲಿರುವಂತಹ ಬಡವರ ಸೇವೆಯಲ್ಲಿ ದೇವರನ್ನು ನೋಡು ಎಂದಿದ್ದಾರೆ,
ಚಳ್ಳಕೆರೆ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಕೂಡ ಈ ನಡೆಯ ಕೈಂಕರ್ಯವನ್ನು ಕೈಗೆತ್ತಿಕೊಂಡಿದ್ದೇವೆ ಸಮಾಜದಲ್ಲಿರುವಂತಹ ಉಳ್ಳವರು ಉಳಿತಾಯದ ಸ್ವಲ್ಪ ಭಾಗಂಶವನ್ನು ಇಂತಹ ವರ್ಗದವರಿಗೆ ನೀಡಿದಲ್ಲಿ ಇವರುಗಳ ಬದುಕು ಹಸನಾಗುತ್ತದೆ ನಾಳೆ ನಡೆಯುವÀಂತಹ ಕ್ರಿಸ್ಮಸ್ ಹಬ್ಬದ ಮೂಲಕ ತಾಲೂಕಿನ ಸರ್ವ ಜನರು ಕೂಡ ಆರೋಗ್ಯ ಕ್ಷೇಮ ಮತ್ತು ಆತ್ಮಸ್ಥೈರ್ಯದಿಂದ ಬದುಕನ್ನು ಎದುರಿಸಲಿ ಎಂದು ಆ ಯೇಸುವನ್ನು ಪ್ರಾರ್ಥಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇನ್ಫೆಂಟ್ ಜೀಸಸ್ ಚರ್ಚ್ ಫಾದರ್ ಅಲೆಕ್ಸಾಂಡರ್ ಸಾಲಮನ್ ಸತೀಶ್ ಮುಂತಾದವರು ಉಪಸ್ಥಿತರಿದ್ದರು.