ಚಳ್ಳಕೆರೆ : ಈಗಾಗಲೇ ರಾಜ್ಯದಲ್ಲಿ ದುರಾಡಳಿತದಿಂದ ಕೂಡಿದ ಸರಕಾರಗಳ ವೈಪಲ್ಯಗಳಿಂದ ರಾಜ್ಯದ ಜನತೆ ನಮ್ಮ ಜೆಡಿಎಸ್ ಪಕ್ಷಕ್ಕೆ ಒಲವು ತೋರುತ್ತಿರುವುದು ಸಂತಸ ತಂದಿದೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಾಲೂಕ ಅಧ್ಯಕ್ಷ ಎಸ್.ಯರಗುಂಟಪ್ಪ ಹೇಳಿದ್ದಾರೆ.
ಅವರು ತಾಲೂಕಿನ ತಳಕು ಹೋಬಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಆಮ್ಮಿಕೊಂದ್ದ ಕಾರ್ಯಕ್ರದಮಲ್ಲಿ ಭಾಗವಹಿಸಿ ಮಾತನಾಡಿದರು, ಜೆಡಿಎಸ್‌ನ ಪಂಚರತ್ನ ಯೋಜನೆ ಬಗ್ಗೆ ಜನಸಾಮಾನ್ಯರಿಗೆ ಬಡಬಗ್ಗರಿಗೆ ಹರಿವು ಮೂಡಿಸುವ ಮೂಲಕ ಅವರಿಗೆ ಅನುಕೂಲವಾಗುವ ಯೋಜನೆ ಇದಾಗಿದೆ, ಈ ಹಿಂದೆ ಮುಖ್ಯಮಂತ್ರಿ ಯಾದಂತ ಸಂದರ್ಭದಲ್ಲಿ ಹಲವಾರು ಯೋಜನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಳಕು ಹೋಬಳಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಜಿಲ್ಲಾಧ್ಯಕ್ಷರವವರ ಆದೇಶದ ಮೇರೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಯೋಜನೆಯ ಬಗ್ಗೆ ಹಾಗೂ ಪಕ್ಷ ಸಂಘಟನೆಯ ಸಲವಾಗಿ ಈ ಸಭೆಯನ್ನು ಹಮ್ಮಿಕೊಳ್ಳಲಾಯಿತು
ಇನ್ನು ಈ ಸಂದರ್ಭದಲ್ಲಿ ಕುಮಾರಣ್ಣನವರ ಪಂಚರತ್ನ ಯೋಜನೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ತಾಲೂಕು ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಪಿ.ರಂಗಸ್ವಾಮಿ ಕಾಲುವೆಹಳ್ಳಿ ಮಾತನಾಡಿ, ಸಂಘಟನೆಯ ಬಗ್ಗೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಓಬಣ್ಣ, ಜೆಡಿಎಸ್ ತಾಲೂಕು ಪದಾಧಿಕಾರಿಗಳಾದ ಕೆಡಿಕೋಟೆ ನಾಗೇಂದ್ರ, ನಾಗರಾಜು, ಡಿಬಿ.ಕರಿಬಸಪ್ಪ, ಚೌಳಕೆರೆ ಡಿ.ಸಣ್ಣಪಾಲಯ್ಯ, ಕೊರಡಿಯಲ್ಲಿ ಸುರೇಂದ್ರ, ಗೌರಸಮುದ್ರ ನಾಗರಾಜು, ತಾಲೂಕು ಯುವ ಘಟಕ ಅಧ್ಯಕ್ಷ ಸಿದ್ಧಲಿಂಗಮೂರ್ತಿ, ತಳಕು ಹೋಬಳಿ ಅಧ್ಯಕ್ಷ ತಿಪ್ಪೇಸ್ವಾಮಿ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ವಸಂತ, ಹಾಗೂ ಪಕ್ಷದ ಮುಖಂಡರಾದ ಬೊಮ್ಮಲಿಂಗಯ್ಯ, ಪಿ.ಮಂಜುನಾಥರೆಡ್ಡಿ, ವರವು ಮಂಜಣ್ಣ, ಹಿರೇಹಳ್ಳಿ ಬೋರಯ್ಯ, ಮನೆಕೋಟೆ ಮಹಾಂತೇಶ ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು

About The Author

Namma Challakere Local News
error: Content is protected !!