ಚಳ್ಳಕೆರೆ : ಸಮುದಾಯದ ಏಳಿಗೆಗೆ ಸಂಘ ಸಂಸ್ಥೆಗಳು ಅನಿವಾರ್ಯ, ಆದ್ದರಿಂದ ಒಂದು ಸಮಾಜದ ಇತ ದೃಷ್ಠಿಯಿಂದ ಈ ಮಹಾವೇದಿಕೆ ಸಜ್ಜಾಗಿರುವುರುದು ಶ್ಲಾಘನೀಯ ಎಂದು ರಾಜ್ಯಾದ್ಯಾಕ್ಷ ರಾಜಣ್ಣ ಲಕ್ಷ್ಮೀಸಾಗರ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇಧಿಕೆ ಮೂಲಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ, ಇಂದು ರಾಜ್ಯದಲ್ಲಿ ನಾಯಕ ಸಮುದಾದಯ ಹೆಸರು ಹೇಳಿಕೊಂಡು ಮಿಸಲಾತಿಯೊಳಗೆ ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟನಲ್ಲಿ ಮಹಾ ವೇದಿಕೆ ಕಾರ್ಯ ನಿರ್ವ ಹಿಸುತ್ತದೆ, ಇಗಾಗಲೇ ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಿಕ್ಕಿ ಬಿದ್ದಿದ್ದಾರೆ ಇದರಿಂದ ನಮ್ಮ ನಿಜವಾದ ಸಮುದಾಯದವರಿಗೆ ಅನ್ಯಯವಾಗುತ್ತದೆ ಎಂದರು.
ಇನ್ನೂ ಜಿಲ್ಲಾಧ್ಯಕ್ಷ ಪ್ರಶಾಂತ್ ಮಾತನಾಡಿ, ಕಳೆದ ಒಂದು ವರ್ಷದಿಂದ ಪ್ರಾರಂಭಗೊAಡಿರುವ ಈ ವೇದಿಕೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ, ಸಮುದಾಯದ ಮುನ್ನಡೆಗೆ ಕಾರಣವಾಗುತ್ತದೆ, ಇದರಿಂದ ನಕಲಿ ಜಾತಿಪ್ರಮಾಣ ಪತ್ರಕ್ಕೂ ಹಾಗೂ ಸುಳ್ಳು ಪ್ರಮಾಣ ಪತ್ರ ಪಡೆಯುವ ಆವಳಿಗೆ ಕಡಿವಾಣ ಹಾಕಲು ನೊಂದ ಸಮುದಾಯವರಿಗೆ ಧ್ವನಿಯಾಗಲು ಈ ವೇದಿಕೆ ಸದಾ ಸಿದ್ದವಿದೆ ಎಂದರು.
ಇದೇ ಸಂಧರ್ಭದಲ್ಲಿ ರಾಜ್ಯಾದ್ಯಾಕ್ಷ ರಾಜಣ್ಣ ಲಕ್ಷ್ಮೀಸಾಗರ, ರಾಜ್ಯ ಉಪಾಧ್ಯಕ್ಷ ಪಂಪಪತಿ, ನಿರ್ದೇಶಕ ಅಂಜಿನಪ್ಪ. ಪ್ರಧಾನಕಾರ್ಯದರ್ಶಿ ಮಂಜಣ್ಣ , ರಂಗಸ್ವಾಮಿ. ಜಿಲ್ಲಾಧ್ಯಕ್ಷ ಪ್ರಶಾಂತನಾಯಕ, ನಾಯಕ ಸಮಾಜದ ನಿವೃತ್ತಿ ಇಓ ತಿಪ್ಪೆರುದ್ರಪ್ಪ, ಯುವ ಮುಖಂಡ ಸುರೇಶ್(ಸೂರಿ), ಚೇತನ ಕುಮಾರಿ (ಕುಮ್ಮಿ), ವಿಶ್ವನಾಥ್, ಟಿ.ಜೆ.ತಿಪ್ಪೆಸ್ವಾಮಿ, ಉಗ್ರಪ್ಪ. ಭೈಯಣ್ಣ, ರಾಮರಾಜ್, ಲಕ್ಷ್ಮಣ, ದರ್ಶನ, ವಿನಾಯ, ಇತರರು ಇದ್ದರು