ಬೋವಿ ಸಮಾಜದ ಸ್ವಾಮೀಜಿ ಮೇಲೆ ಅಬೆಟ್ ಕಲಂ ಪ್ರಕಾರ, ಪ್ರಕರಣ ದಾಖಲು ಮಾಡಲು : ದಲಿತ ಸಂಘಟನೆಗಳ ಒತ್ತಾಯ
ಚಳ್ಳಕೆರೆ : ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿ ಜಾರಿ ಮಾಡದಂತೆ ಬೋವಿ ಜನಾಂಗದ ಸ್ವಾಮಿಜೀ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿರುವುದು ಖಂಡನೀಯ ಎಂದು ಸಮಾಜಿಕ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಗ್ರೇಡ್ 2 ತಹಶಿಲ್ದಾರ ಸಂಧ್ಯಾ ರವರಿಗೆ ಸಾಮಾಜಿಕ ಸಂಘರ್ಷ ಸಮಿತಿವತಿಯಿಂದ ಮನವಿ ನೀಡಿದ ಅವರು ಇಂದು ನಾಗರೀಕ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ನಾಗರೀಕನಿಗೂ ತನ್ನದೇ ಆದಹಕ್ಕುಗಳನ್ನು ನೀಡಿದ ಬಾಬಾ ಸಾಹೇಬರ ಸಂವಿಧಾನ ಆಶಯಗಳಿಗೆ ದಕ್ಕೆ ತರುವ ನಿಟ್ಟಿನಲ್ಲಿ ಸಂವಿಧಾನಿಕ ಹಕ್ಕು ಕಸಿದುಕೊಳ್ಳುವ ಮೂಲಕ ಒಳ ಮೀಸಲಾತಿ ಜಾರಿ ಗೊಳಿಸದಂತೆ ಮನವಿ ನೀಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
ಈ ರೀತಿಯ ಕ್ರಮಕ್ಕೆ ಸ್ವಾಮಿಜೀವರು ಮುಂದಾಗಬಾರದು ಪ್ರತಿಯೊಂದು ಜಾತಿಗೂ, ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಆದಮೀಸಲಾತಿ ಇದೆ ಅದರಂತೆ ಅವರು ಹೊರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಇನ್ನೋಂದು ಸಮಾಜದವರಿಗೆ ಒಳ ಮೀಸಲಾತಿ ಜಾರಿ ಮಾಡಬಾರದು ಎಂಬುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟಿ.ವಿಜಯ್ ಕುಮಾರ್ ಮಾತನಾಡಿ, ಈಡೀ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ಗೌರವಿಸುವುದು ಹಾಗೂ ಪಾಲಿಸುವುದು ನಮ್ಮ ಕರ್ತಯ್ಯ ಆದರೆ ಒಂದು ಜಾತಿಗೆ ಒಳಮೀಸಲಾತಿ ಕೊಡಬಾರದು ಎಂಬುದು ಸರಿಯಲ್ಲ ಇದನ್ನು ಪರಿಶಿಷ್ಟ ಜಾತಿಯ ಜನಾಂಗದ ಅರ್ಥಮಾಡಿಕೊಳ್ಳುವ ಮೂಲಕ ಬೋವಿ ಸಮಾಜದ ಸ್ವಾಮೀಜಿ ಯನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯವಿದೆ ಎಂದರು.
ಇದೇ ಸಂಧರ್ಭದಲ್ಲಿ ಮೈಲನಹಳ್ಳಿ ತಿಪ್ಪೇಸ್ವಾಮಿ, ಮೈತ್ರಿ ದ್ಯಾಮಣ್ಣ, ಇತರರು ಪಾಲ್ಗೊಂಡಿದ್ದರು