ಚಳ್ಳಕೆರೆ : ಗ್ರಾಮ ತೊರೆದು ಪಟ್ಟಣದ ಆಶ್ರಯ ಪಡೆದ ಬೂದಿಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು ಕುಟುಂಬಗಳು ದೌರ್ಜನ್ಯಕ್ಕೆ ಒಳಗಾಗಿ ನಗರದ ಕೆರೆಯಂಗಳದಲ್ಲಿ ಗುಡಿಸಲು ಹಾಕಿಕೊಂಡಿರುವುದನ್ನು ಗಮನಿಸಿ ಇಂದು ಅವರಿಗೆ ಸುಮಾರು 175 ಕುಟುಂಬಳಿಗೆ ನಿವೇಶನ ಸಹಿತ ವಸತಿ ಮನೆಗಳನ್ನು ಕಟ್ಟಿಸಿಕೊಡುವುದರ ಮೂಲಕ ಶಾಶ್ವತ ಪರಿಹಾರ ಹೊದಗಿಸಲಾಗಿದೆ ಎಂದು ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಅಭಿಷೇಕ್ ನಗರದಲ್ಲಿ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ರಾಜೀವ್ ಗಾಂಧಿ ವಸತಿ ಯೋಜನೆಯಡಿ 9.00 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭವಾಗಲಿರುವ 175 ಮನೆಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.
ಈಡೀ ಕ್ಷೇತ್ರದಲ್ಲಿ ಪ್ರತಿಯೊಂದು ಜಾತಿಗೂ ಪ್ರತಿಯೊಂದು ಗ್ರಾಮಕ್ಕೂ ನಿವೇಶನ, ಹಾಗೂ ಸ್ಮಶಾನ ನೀಡುವ ಕಾರ್ಯ ಈಗಾಗಲೇ ಸಾಗುತಿದೆ ಅದರಂತೆ ದಲಿತ ಕುಟುಂಬಗಳ ಬೇಡಿಕೆಗೆ ಅನುಗುಣವಾಗಿ ಸುಮಾರು 175 ವಸತಿಗಳನ್ನು ಕಟ್ಟಿಸಿಕೊಂಡುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರಾದ ಗಂಗಾಧರ, ಪೌರಾಯುಕ್ತರಾದ ಸಿ.ಚಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜನೇಯ, ಉಪಾಧ್ಯಕ್ಷರಾದ ಮಂಜುಳಾ ಪ್ರಸನ್ನ ಕುಮಾರ್, ನಗರಸಭೆ ಸದಸ್ಯರುಗಳಾದ ಸುಮಾ ಭರಮಣ್ಣ, ಮಲ್ಲಿಕಾರ್ಜುನ, ವೀರಭದ್ರಪ್ಪ, ಮುಖಂಡರುಗಳಾದ ಕೃಷ್ಣಮೂರ್ತಿ, ಭೀಮನಕೆರೆ ಶಿವಮೂರ್ತಿ, ಬೋರಣ್ಣ, ಹೊನ್ನೂರ್‌ಸ್ವಾಮಿ, ಮತ್ತು ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.