ಚಳ್ಳಕೆರೆ : 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ ಕರ್ನಾಟಕದಲ್ಲಿ 150 ಸ್ಥಾನ ಗಳಿಸುವುದು ಖಚಿತ ಎಂದು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಹೇಳಿದ್ದಾರೆ.
ಅವರು ನಾಯಕನಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಂಡಲ ವತಿಯಿಂದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವವನ್ನು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕೊಟ್ಟಂತ ಯೋಜನೆಗಳು ಜನಸಾಮಾನ್ಯರು ಹಾರಿತು ಇಂದು ಗುಜರಾತ್ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ 182 ಸ್ಥಾನಕ್ಕೆ 156 ಸ್ಥಾನ ಗಳಿಸಿ ಭರ್ಜರಿ ಜಯ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಪಿ ಶಿವಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷ ಟಿ.ಶಿವದತ್ತ, ಮಂಡಲ ಉಪಾಧ್ಯಕ್ಷರಾದ ಚಂದ್ರಣ್ಣ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ, ಮಲ್ಲೂರಹಳ್ಳಿ ಬಿಜೆಪಿ ಮುಖಂಡ ಮಲ್ಲಯ್ಯ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಬಿ ರಾಜು, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿಡ್ಡಾಪುರ ಬೋರೆಯ್ಯ, ಗೌಡಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಒ ಓಬಳೇಶ್, ವಿಷ್ಣುಸಿಂಹ, ಕಾರ್ಯಾಲಯ ಕಾರ್ಯದರ್ಶಿ ತಿಪ್ಪೇಶ್, ನಿರಂಜನ್, ಸುರೇಶ್ ಇತರರು ಇದ್ದರು.