ಪ್ರತಿ ವರ್ಷದಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ದತ್ತ ಜಯಂತಿ ಆಚರಣೆ
ಚಳ್ಳಕೆರೆ ; ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನಗರದ ತ್ಯಾಗರಾಜ ನಗರದಲ್ಲಿರುವ ದತ್ತ ಪಾದುಕಾ ಔದುಂಬರೇಶ್ವರ ಕ್ಷೇತ್ರದಲ್ಲಿ ದತ್ತ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದೊAದಿಗೆ ಆಚರಣೆ ಮಾಡಲಾಯಿತು.
ನಗರದ ಔದುಂಬರೇಶ್ವರ ದೇವಸ್ಥಾನದಲ್ಲಿ ದೇವರಿಗೆ ಕಾಕಡಾರತಿ, ಗಣಪತಿ ಪೂಜೆ,ಪುಣ್ಯಾಹ, ದೇವನಾಂದಿ, ರುದ್ರಾಭಿಷೇಕ, ಗುರುಚರಿತ್ರೆ ಪಾರಾಯಣ, ವಿಷ್ಟು ಸಹಸ್ರನಾಮ ಸೇರಿದಂತೆ ಸತ್ಯ ದತ್ತವ್ರತ, ಭಜನೆ ಕಾರ್ಯಕ್ರಮ ದೊಂದಿಗೆ ದತ್ತಾತ್ರಯ ಗುರುಗಳ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಸುಮಂಗಲೆಯರು ನೆರವೇರಿಸಿದರು.
ನೂರಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.