ಚಳ್ಳಕೆರೆ ನಗರದಲ್ಲಿ : ಪ್ರಪ್ರಥಮ ಬಾರಿಗೆ ಸಂಜೀವಿನಿ ಟ್ರಸ್ಟನ ರಾಜ್ಯ ಸಮಾವೇಶ

ಚಳ್ಳಕೆರೆ : ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಸಮಾವೇಶವನ್ನು ಪ್ರಪ್ರಥಮ ಬಾರಿಗೆ ಚಳ್ಳಕೆರೆ ತಾಲೂಕಿನಲ್ಲಿ ನಡೆಯಲಿದ್ದು ಕಾರ್ಯಕ್ರಮದ ಉದ್ದೇಶವು ಸಂಪೂರ್ಣವಾಗಿ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವಾಗಿರುತ್ತದೆ ಎಂದು ಸಂಜೀವಿನಿ ಟ್ರಸ್ಟ್ನ ರಾಜ್ಯಾಧ್ಯಕ್ಷ ಡಿ.ರಂಗಸ್ವಾಮ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾರ್ಯಕ್ರಮವು ಹಲವಾರು ವಿಶೇಷತೆಗಳಿಂದ ಕೂಡಿದ್ದು ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಹಾಗೂ ರಸ್ತೆ ಅಪಘಾತಗಳ ನಡೆದಾಗ ಸ್ಥಳಕ್ಕೆ ಧಾವಿಸಿ ನೆರವು ನೀಡುವುದು, ಸಂಚಾರಿ ನಿಯಮಗಳ ಪಾಲನೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸಂಜೀವಿನಿ ಟ್ರಸ್ಟ್ ಸದಸ್ಯರು ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 2000 ಸದಸ್ಯರನ್ನು ಹೊಂದಿದ್ದು ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ 10,000ಸದಸ್ಯರು ಭಾಗವಹಿಸುವ ಗುರಿ ಹೊಂದಿದ್ದು ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಒಟ್ಟುಗೂಡಿಸಿ ನಡೆಸಲಾಗುವುದು ಎಂದರು.
ಸAಜೀವಿನಿ ಜೀವ ರÀಕ್ಷಕ ಟ್ರಸ್ಟ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಬತ್ತಯ್ಯನಹಟ್ಟಿ ಶಶಿಧರ್ ಮಾತನಾಡಿ ಈ ಸಮಾವೇಶವು ಆರ್‌ಟಿಓ.ಇಲಾಖೆ ಸಹಾಯಯೋಗದೊಂದಿಗೆ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಹಾಗೂ ಇನ್ಸೂರೆನ್ಸ್ ಡಿಎಲ್ ಮಾಹಿತಿ ನೀಡುವ ಕೌಂಟರ್‌ಗಳನ್ನು ತೆರೆಯಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರಸ್ತೆ ಸುರಕ್ಷತೆಗೆ ಒತ್ತು ನೀಡಿರುವಂತಹ ಮಾಹಿತಿ ಕೈಪಿಡಿಗಳು ಲಭ್ಯವಾಗುತ್ತವೆ, ಇದರಿಂದ ಚಳ್ಳಕೆರೆ ಭಾಗದಲ್ಲಿ ರಾಜ್ಯ ಹೆದ್ದಾರಿ ಹೆಚ್ಚಾಗಿ ಗ್ರಾಮಗಳು ಮತ್ತು ನಗರಗಳ ಮಧ್ಯೆ ಹಾದು ಹೋಗಿರುವುದರಿಂದ ಇಲ್ಲಿನ ದಿನನಿತ್ಯ ಸಂಚರಿಸುವ ಜನರಲ್ಲಿ ಹೆಚ್ಚು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡುತ್ತದೆ ಆದ್ದರಿಂದ ಸಮಾವೇಶವನ್ನು ನಮ್ಮ ಚಳ್ಳಕೆರೆ ಭಾಗದಲ್ಲಿ ಆಯೋಜನೆ ಮಾಡಿದ್ದಲ್ಲಿ ಸವಾರರು ಹೆಚ್ಚು ಜಾಗೃತರಾಗುವವರು ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ನೇರಲಗುಂಟೆ ತಿಪ್ಪೇಸ್ವಾಮಿ ಮಾತನಾಡಿ ಹಲವಾರು ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಆಯೋಜನೆ ಮಾಡಿರುವುದರಿಂದ ಇಲ್ಲಿನ ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು, ಪ್ರಸ್ತುತ ದಿನಗಳಲ್ಲಿ ರಸ್ತೆ ಅಪಘಾತಗಳು ನಮ್ಮ ತಾಲೂಕಿನಲ್ಲಿ ಹೆಚ್ಚಾಗಿದ್ದು ಅನೇಕ ಸಾವು ನೋವುಗಳು ಸಂಭವಿಸಿದೆ ಕಾರ್ಯಕ್ರಮವು ಇಲ್ಲಿ ನಡೆಯುವುದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದೆಂಬ ನಂಬಿಕೆ ನಮ್ಮದ್ದಾಗಿದೆ ಈ ಕಾರ್ಯಕ್ರಮವು ರಾಜ್ಯದಲ್ಲೇ ಪ್ರಥಮ ಬಾರಿಗೆ ನಮ್ಮ ಚಳ್ಳಕೆರೆ ತಾಲೂಕಿನಲ್ಲಿ ನಡೆಯುತ್ತಿರುವುದು ನಮಗೆ ಒಂದು ಹೆಮ್ಮೆ ಎಂದು ತಿಳಿಸಿದರು.
ಶ್ರೀನಿವಾಸ್ ಡಿಟಿ ದುಗ್ಗಾವರ ಇವರು ಮಾತನಾಡಿ, ರಸ್ತೆ ಕ್ರಾಸ್‌ಗಳಲ್ಲಿ ಸುರಕ್ಷತಾ ಕ್ರಮಗನ್ನು ಇನ್ನು ಹೆಚ್ಚಾಗಿ ಅಳವಡಿಸಬೇಕಾಗಿದೆ ಇನ್ನು ಹೆಚ್ಚಿನದಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ನಮ್ಮ ತಾಲೂಕಿನಲ್ಲಿ ಸಮಾವೇಶ ನಡೆಯುವುದರಿಂದ ಇಲ್ಲಿ ಹೆಚ್ಚಿನದಾಗಿ ಸದಸ್ಯರು ರಸ್ತೆ ಅಪಘಾತಗಳ ಬಗ್ಗೆ ಜಾಗೃತಿ ವಹಿಸುತ್ತಾರೆ ಇದರಿಂದ ಅಪಘಾತಗಳಾದಾಗ ರಕ್ಷಣೆಗೆ ನೆರವು ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮುಕ್ತಿಯರ್, ಕಾಟವನಹಳ್ಳಿ ಶಿವಣ್ಣ, ಸಂಜೀವಿನಿ ಟ್ರಸ್ಟ್ನ ಪದಾಧಿಕಾರಿಗಳು ಸದಸ್ಯರು ಇದ್ದರು.

About The Author

Namma Challakere Local News
error: Content is protected !!