ಚಳ್ಳಕೆರೆ : ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆ ಅಪಘಾತ್ಕಕೆ ಸಿಲುಕಿ ಪ್ರಾಣ ಬಿಟ್ಟ ಚಾಲಕನ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳದ ರಸ್ತೆ ಅಭಿವೃದ್ದಿ ಪ್ರಾಧಿಕಾರದ ವಿರುದ್ದ ಇಂದು ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹೌದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಶಿವಗಾಂಗ ಪೆಟ್ರೋಲ್ ಬಂಕ್ ಸಮೀಪದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಅವೈಜ್ಞಾನಿಕವಾಗಿ ಮಣ್ಣಿನ ರಾಶಿ ಹಾಕಿ ಬಸ್ ಚಾಲಕ ಜೆ.ಎಸ್. ಉಮೇಶ್ (34) ಇವರ ಸಾವಿಗೆ ಕಾರಣರಾದ ಪಿಎನ್‌ಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಕೆಲ ಕಾಲ ರಾಜ್ಯ ಹೆದ್ದಾರಿ ತಡೆದು ತಮ್ಮ ಅಳಲು ವ್ಯಕ್ತಪಡಿಸಿದರು.
ಇನ್ನೂ ಸ್ಥಳಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಈ ಕೂಡಲೇ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿ ನಿಮಗೆ ಸೂಕ್ತವಾದ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುವೆ, ಹಾಗೂ ಈ ಅವೈಜ್ಞಾನಿಕ ರಸ್ತೆ ಕಾಮಗಾರಿ ಮಾಡಲು ಮಣ್ಣಿನ ರಾಶಿ ಹಾಕಿದ ಕಂಪಿನಿಯ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸುವೆ ಎಂದು ಎಳೆಯ ಕಂದಮ್ಮಗಳ ಆಂಕ್ರದನಕ್ಕೆ ಮರುಗಿದ ತಹಶೀಲ್ದಾರ್ ಭಾವುಕರಾಗಿ ಕಣ್ಣಾಂಚಲಿ ನೀರು ತಂದರು.
ಸ್ಥಳದಲ್ಲಿ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಹಾಗೂ ಸಿಬ್ಬಂದಿ ರಸ್ತೆ ತಡೆದು ಪ್ರತಿಭಟನೆ ಮಾಡುವವರನ್ನು ಮನಹೊಲಿಸಿ ಸೂಕ್ತ ಪರಿಹಾರ ನೀಡಲು ತಹಶೀಲ್ದಾರ್ ಸಮ್ಮುಖದಲ್ಲಿ ಚರ್ಚಿಸಿ ರಸ್ತೆ ತಡೆಯಿಂದ ತೆರವುಗೊಳಿಸಿದರು.
ಆದರೆ ಸಾರಿಗೆ ಸಚಿವ ಬಿ.ಶ್ರೀರಾಮುಲು ನೇತೃತ್ವದ ಎಸ್‌ಟಿ ವಿರಾಟ್ ಸಮೇಶಕ್ಕೆ ಸಾರಿಗೆ ನಿಗಮದಿಂದ ಸಾರ್ವಜನಿಕರನ್ನು ಕರೆತಂದು ಮರು ವಾಪಸ್ ಹೋಗುವಾಗ ಸಾರಿಗೆ ನೌಕರ ರಸ್ತೆ ಅಫಘಾತಕ್ಕೆ ಸಿಲುಕಿ ಮೃತಪಟ್ಟರು ಪಕ್ಕದ ಕ್ಷೇತ್ರದ ಶಾಸಕನಾದರೂ ಕನಿಷ್ಠ ಸಾಂತ್ವನ ಹೇಳದೆ, ಪರಿಹಾರ ನೀಡದೇ ಇರುವುದು ಪ್ರತಿಭಟನಾಕಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಇನ್ನೂ ಯಾವುದೇ ಕಾರ್ಯಕರ್ತರು ಕೂಡ ಕನಿಷ್ಠ ಪಕ್ಷ ಎಳೆಯ ಕಂದಮ್ಮಗಳ ನೆರವಿಗೆ ಬಾರದೇ ಇರುವುದು ಶೋಚನೀಯ ಎಂದು ಕುಟುಂಬಸ್ಥರು ಆಕ್ರಂದನ ವ್ಯಪಡಿಸಿದರು.
ಇನ್ನೂ ಸ್ಥಳದಲ್ಲಿ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ,
ಇನ್ನೂ ಮೃತ ಉಮೇಶ್ ನ ಹೆಂಡತಿ ದೀಪಾ ತಮ್ಮ ನೋವಿನ ತೋಡಿಕೊಂಡ ಪರಿ.
ಇದೇ ಸಂಧರ್ಭದಲ್ಲಿ ಅನೂಸುಯಮ್ಮ, ಹನುಮಂತರಾಯ, ಇತರರು ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.