ಚಳ್ಳಕೆರೆ : ಮತದಾನದ ಹಕ್ಕು, ನಮ್ಮ ಹಕ್ಕು ಈ ಮತದಾನದಿಂದ ಯಾರೂ ಕೂಡ ವಂಚಿತರಾಗದAತೆ ಮತಪಟ್ಟಿ ಪರಿಷ್ಕರಣೆ ನಡೆಯಬೇಕು, ಮತಪಟ್ಟಿ ಪರಿಷ್ಕರಣೆ ಸರಿಯಾದ ರೀತಿಯಲ್ಲಿ ನಡೆದರೆ ಚುನಾವಣೆ ಕೂಡ ಸರಿಯಾದ ದಿಕ್ಕಿನಲ್ಲಿ ನಡೆಯುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲರಾದ ಟಿ.ಶಶಿಕುಮಾರ್ ಹೇಳಿದ್ದಾರೆ.
ಅವರು ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡ ಮತಪಟ್ಟಿ ಪರಿಷ್ಕರಣೆ ಜಾಗೃತಿ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು.
ಸುಭದ್ರಾ ಸರ್ಕಾರಕ್ಕಾಗಿ 18ವರ್ಷ ಪೂರೈಸಿದ ವಯಸ್ಕರರು ಮತದಾನ ಹಕ್ಕು ಪಡೆದು ಭ್ರಷ್ಟಚಾರ ನಿರ್ಮೂಲನೆ ಮಾಡಲು ಮುಂದಾಗಬೇಕು, ಈ ಒಂದು ಅಭಿಯಾನ ಎಲ್ಲಾ ಮತದಾರರಿಗೂ ತಿಳಿಯಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಕೊರ್ಲಯ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು, ಗ್ರಾಮಸ್ಥರು ಇತರರು ಪಾಲ್ಗೋಂಡಿದ್ದರು.