ಚಳ್ಳಕೆರೆ : ಈಗೀನ ಆಧುನಿಕ ಕಾಲಗಟ್ಟದಲ್ಲಿ ಆಹಾರ ಸಮತೋಲನ ಮನುಷ್ಯನ ಒಂದು ಭಾಗವಾಗಿ ಪರಿಣಮಿಸಿದೆ, ಆಹಾರದ ಕ್ರಮಗಳನ್ನು ನಿಯಂತ್ರಣದಲ್ಲಿಟ್ಟುಕೊAಡು ಉತ್ತಮ ಆಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮುಖ್ಯ ಶಿಕ್ಷಕ ಜಿ.ವೆಂಕಟಸ್ವಾಮಿ ಹೇಳಿದ್ದಾರೆ.
ಅವರು ತಾಲೂಕಿನ ಚನ್ನಗಾನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಿರಿಧಾನ್ಯ ಸಪ್ತಾಹ ಕಾರ್ಯಕ್ರಮಲ್ಲಿ ಮಕ್ಕಳಿಗೆ ಸಿರಿಧಾನ್ಯ ಬಳಕೆಯ ಕುರಿತು ಮಾತನಾಡಿದರು.

ಮನುಷ್ಯ ಆರೋಗ್ಯಕರವಾಗಿ ಇರಲು ಅವನು ಬಳಸುವ ಆಹಾರದ ಕ್ರಮ ಸರಿಯಾಗಿರಬೇಕು, ಅವನು ನಿತ್ಯ ಸೇವಿಸುವ ಆಹಾರದ ಪದಾರ್ಥಗಳು ಪೋಷ್ಠಿಕತೆಯಿಂದ ಕೂಡಿರಬೇಕು, ಆದ್ದರಿಂದ ಸಿರಿದಾನ್ಯ ಬಳಕೆಗೆ ಹಾಗೂ ಮಕ್ಕಳಿಗೆ ಹರಿವು ಮೂಡಿಸು ಸಲುವಾಗಿ ರಾಜ್ಯ ಸರಕಾರ ಸಿರಿದಾನ್ಯ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಆಹಾರದ ಕ್ರಮ ಎಂದರು.

ಇನ್ನೂ ಈದೇ ಸಂಧರ್ಭದಲ್ಲಿ ಸಹ ಶಿಕ್ಷಕರಾದ ಆರ್.ಭಾಗ್ಯ, ಅತಿಥಿ ಶಿಕ್ಷಕರಾದ ಹೆಚ್.ಕುಬೇಂದ್ರ, ಕೆ.ವೀರೇಶ್, ಅಂಗನವಾಡಿ ಕಾರ್ಯಕರ್ತೆ ಆರ್.ನೇತ್ರಾ ಹಾಗೂ ಮಕ್ಕಳು ಹಾಜರಿದ್ದರು.

About The Author

Namma Challakere Local News
error: Content is protected !!