ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದ್ದಾರೆ.
ನಗರದ ವಾಲ್ಮೀಕಿ ವೃತ್ತದಲ್ಲಿ ತ.ರಾ.ಸು ಕನ್ನಡ ಸಂಘದಿAದ ಆಯೋಜಿಸಿದ್ದ ಐದನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ದಶಕಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಅನ್ಯಭಾಷೆಯನ್ನು ಕಲಿಯಬೇಕೆಂದು ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತÀವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡಿದ್ದರು ಎಂದು ಕನ್ನಡವನ್ನು ನೆನೆದರು.
ಇನ್ನೂ ತರಾಸು ಕನ್ನಡ ಸಂಘದ ಅಧ್ಯಕ್ಷ ಜಿಟಿ.ಗೊಂವಿದ್ ರಾಜ್ ಮಾತನಾಡಿ, ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸಾಧ್ಯವಾಯಿತು, ಕನ್ನಡ ನೆಲ,ಜಲ, ಭಾಷೆಗೆ ಒತ್ತು ನೀಡಬೇಕು, ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮುಗ್ಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮ ಫಲಕರಗಳನ್ನು ಹಾಕಬೇಕು ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಎಂ.ಶಿವಮೂರ್ತಿ, ಅಖಂಡ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ತಿಪ್ಪೆಸ್ವಾಮಿ(ಸೃಷ್ಠಿ), ಅಜ್ಜಣ್ಣ, ನಾಕುತಂತಿ, ಸೈಯದ್, ಇತರರು ಇದ್ದರು.