ವಲಯ ಮಟ್ಟದ ಯೋಗ ಶಿಕ್ಷಣದಲ್ಲಿ ಉತ್ತಮ ತರಬೇತಿ

ಚಳ್ಳಕೆರೆ : ಸಂಸ್ಕಾರ ಸಂಘನೆ, ಸೇವೆ ಈ ಧ್ಯೇಯದೊಂದಿಗೆ ನಾಡಿನಾದ್ಯಾಂತ ತನ್ನ ಶಾಖೆಯನ್ನು ಹೊಂದಿರುವ ಪಂತಜಲಿ ಯೋಗ ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯವಿದೆ ಎಂದು ಯೋಗಶಿಕ್ಷಣದ ಮುಖ್ಯ ಶಿಕ್ಷಕರಾದ ಮನೋಹರ್ ಅಣ್ಣ ಹೇಳಿದ್ದಾರೆ.
ಅವರು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಯೋಗ ಶಿಕ್ಷಣ ಕಾರ್ಯಗಾರದಲ್ಲಿ ಮಾತನಾಡಿ, ಯೋಗ ಎಂಬುದು ಮನುಷ್ಯನ ಜೀವನವನ್ನು ಅಸನು ಮಾಡುತ್ತದೆ, ಸಾಮಾಜಿಕ, ಸಂಸ್ಕಾರ ಜೀವನದ ಜೋತೆಗೆ ಮನಶಾಂತಿ ನೀಡುತ್ತದೆ ಎಂದರು.
ವಲಯ ಮಟ್ಟದ ಯೋಗ ಶಿಕ್ಷಣದಲ್ಲಿ ಚಿತ್ರದುರ್ಗ, ದಾವಣಗೆರೆ, ಹಾಗೂ ಶಿವಮೊಗ್ಗ ಶಿಬಿರಾರ್ಥಿಗಳು ಯೋಗ ಶಿಕ್ಷಣ ಕಾರ್ಯಗಾರದಲ್ಲಿ ಭಾಗವಹಿಸಿದ್ದರು,
ಇದೇ ಸಂಧರ್ಭದಲ್ಲಿ ಯೋಗ ಶಿಕ್ಷಣದಲ್ಲಿ ವಲಯ ಸಂಚಾಲಕ ಕುಮಾರಣ್ಣ, ಕೇಂದ್ರ ಸಮಿತಿ ಪ್ರಮುಖ ಆನಂದ್‌ರಾಜ್, ಯೋಗ ಬಂದು ಡಿ.ನಾಗಪ್ಪ, ಯೋಗ ಬಂಧು ಮಹೇಶ್, ದಾಸಪಣ್ಣ, ತಿಪ್ಪೆಸ್ವಾಮಿ, ಯೋಗ ಬಂದು ಎಸ್.ಟಿ.ತಿಪ್ಪೆಸ್ವಾಮಿ ಇತರರು ಇದ್ದರು.

About The Author

Namma Challakere Local News
error: Content is protected !!