ಚಳ್ಳಕೆರೆ : ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತು ಎಷ್ಟೋ ಸತ್ಯವೋ ಅದೇ ರೀತಿಯಲ್ಲಿ ನಮ್ಮ ಉಜ್ವಲ ಭವಿಷ್ಯ ನಮ್ಮ ಕೈಯಲ್ಲಿದೆ ಆದ್ದರಿಂದ ವ್ಯಾಸಂಗದ ಹಂತದಲ್ಲಿ ನಮ್ಮ ಆಯ್ಕೆ ನಮ್ಮ ಗುರಿ ಒಂದಾಗಿರಬೇಕು ಎಂದು ಕಾಲೇಜಿನ ಪ್ರಾಚಾರ್ಯರಾದ ಎಂ.ರವೀಶ್ ಹೇಳಿದ್ದಾರೆ.
ಅವರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಮ್ಮಿಕೊಂಡಿದ್ದ ವಿಜ್ಞಾನ ವಿಭಾಗದ ಆಯ್ದ 25 ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಹರಿವು ಮುಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು,
ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕ ತಿಳುವಳಿಕೆ ಮೂಡಿಸುವ ಮತ್ತು ವಸ್ತುಗಳ ಗುಣಮಟ್ಟ ಗುರುತಿಸುವ ಐಎಸ್‌ಐ, ಐಎಸ್‌ಓ, ಬಿಐಎಸ್, ಗುರುತುಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ವತಿಯಿಂದ ಓರಿಯೆಂಟೇಶನ್ ಪ್ರೋಗ್ರಾಮ್ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವುದು ಸಂತಸದಾಯಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಅಶುತೋಷ್ ಅಗ್ರಿವಾಲ್, ಅಹಮದ್ ಬಿಜಾಪುರ್ ಸ್ಟ್ಯಾಂಡರ್ಡ್ ಪ್ರಮೋಷನ್ ಆಫೀಸರ್ ಹಾಗೂ ಕುಮಾರಿ ಸ್ನೇಹಂ ರಾಯಮನೆ, ಹುಬ್ಬಳ್ಳಿ ವಿಭಾಗ, ಉಪನ್ಯಾಸಕರಾದ ವಸಂತ್ ಕುಮಾರ್, ಕುಮಾರಸ್ವಾಮಿ, ಪುಟ್ಟರಂಗಪ್ಪ, ಈರಣ್ಣ, ಭೀಮರೆಡ್ಡಿ ಪುಷ್ಪಲತಾ, ರೇಖಾ, ಲತಾ, ಸ್ಟ್ಯಾಂಡರ್ಡ್ ಕ್ಲಬ್ ನಿರ್ವಾಹಕಿಯಾದ ಶಾಂತಕುಮಾರಿ, ಚಂದ್ರಶೇಖರ್, ಮಹಂತೇಶ್, ಶಿವಪ್ಪ, ಟಿ. ತಿಪ್ಪೇಸ್ವಾಮಿ, ಜಗದೀಶ್ ಭಾಗಿಯಾಗಿದ್ದರು..