ಚಳ್ಳಕೆರೆ: ಈಡೀ ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜೋತ್ಸವ ಆಚರಣೆ ಮಾಡುತ್ತಿರುವುದು ವಿಪಯಾರ್ಸ ಆದರೆ ಕನ್ನಡ ನೆಲ ಜಲ, ಬಾಷೆ ಉಳಿಸುವ ಕೆಲಸ ನಮ್ಮ ಚಳ್ಳಕೆರೆಯಿಂದ ಪ್ರಾರಂಭವಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಬಿಸಿನಿರು ಮುದ್ದಪ್ಪ ಪ್ರೌಡ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್, ವತಿಯಿಂದ ಆಯೋಜಿಸಿ ಕನ್ನಡ ಕಲಾ ಕುಸುಮ, ಸಾಹಿತ್ಯ ಪಂಚಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಈಡೀ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಉಳಿವಿಗೆ ಸೋಬಾನೆ ಗೀತೆಗಳು ಸಾಕ್ಷಿಕರಿಸುತ್ತವೆ. ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡದ ಬಾಷೆ ಉಳಿಸಬೇಕು, ಕನ್ನಡಬಾಷೆಯಲ್ಲಿ ವ್ಯಾಸಂಗ ಮಾಡಬೇಕು, ಇಂಗ್ಲಿಷ್ ವ್ಯಾಮೋಹ ಯಾವ ರೀತಿಯಲ್ಲಿ ಇದೆ ಎಂದರೆ ಇಂದಿನ ಜನರು ತಮ್ಮ ಮಕ್ಕಳ ವ್ಯಾಸಂಗಕ್ಕೆ ಗ್ರಾಮ ಬಿಟ್ಟು ಪಟ್ಟಣ ಸೇರುವ ಹಂತಕ್ಕೆ ಬಂದು ತಲುಪಿದ್ದಾರೆ.
ಕೆ.ಶಿವರಾಮ್ ಇವರು ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ್ದಾರೆ. ಕನ್ನಡ ಕೇವಲ ಎಂಬ ಮನೋಭಾವ ತಾಳದೆ ಕನ್ನಡದಲ್ಲಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ದೊರಕಿವೆ, ಕನ್ನಡ ಉಳಿಸಿ ಬೆಳೆಸುವ ಕೆಲಸವಾಗಬೇಕು, ತಾಲೂಕಿನ ಸಾಹಿತಿಗಳ ಇತಿಹಾಸವನ್ನು ಜಗತ್ತಿಗೆ ಸಾರುವ ಕೆಲಸವಾಗಬೇಕು, ವೃತ್ತಿ ಪ್ರೌವೃತ್ತಿ ಯಾಗುತ್ತದೆ, ಪ್ರೌವೃತ್ತಿ ವೃತ್ತಿಯಾಗುತ್ತದೆ ಎಂದರು.

ತಹಶೀಲ್ದಾರ್ ಎನ್ .ರಘುಮೂರ್ತಿ ಮಾತನಾಡಿ, ತಾಲೂಕಿನ ಎಲ್ಲಾ ಕವಿಗಳು, ಹಾಗೂ ಸಾಹಿತಿಗಳ ಒಳಗೊಂಡ ಸಾಹಿತಿಗಳನ್ನು ಒಂದೆಡೆ ಸೇರಿಸುವ ಕಾರ್ಯವಾಗಬೇಕು, ತಾಲೂಕಿನ ಇಂತಹ ಸಾಹಿತ್ಯ ಬದುಕನ್ನು ಕಟ್ಟಿಕೊಡುವ ಇವರುಗಳು ನಮ್ಮ ಮುಂದಿನ ಬದುಕಿನ ಮಾರ್ಗದರ್ಶಕರು ಇಂತವರ ಒಳಗೊಂಡ ವಿಕಿ ಪೀಡಿಯ ಮಾಡಿ ಈಡೀ ದೇಶದಲ್ಲಿ ಗಮನಾರ್ಹ ಸಂದೇಶ ರವಾನೆಯಾಗಬೇಕು
ಅದೇ ರೀತಿಯಲ್ಲಿ ತಾಲೂಕಿನಲ್ಲಿ ಸುಮಾರು ಗ್ರಾಮದಲ್ಲಿ ತೆಲುಗು ಭಾಷೆಗಳ ಆವಳಿಯಿಂದ ಜನರು, ಕನ್ನಡ ಬಳಕೆ ಕಡಿಮೆಯಾಗಿದೆ, ಆದ್ದರಿಂದ ಕನ್ನಡ ಕಿಲಿ ಮಣೆಯನ್ನು ವ್ಯಾಪಕವಾದ ಅಂತರ್ಜಾಲ ಬಳಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಣ ಮಾಡೊಣ. ತಾಲೂಕಿನ ಸರ್ವ ಜನಾಂಗದ ಮೂಲಕ ಕನ್ನಡ ಉಳಿಸಿ ಬೆಳೆಸು ಸಂಕಲ್ಪ ಮಾಡೋಣ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಪ್ಪಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಸಾಹಿತ್ಯ ಚಟುವಟಿಕೆಗಳು ಕೊರೊನ ದಿನಗಳಲ್ಲಿ ಕುಂಠಿತ ಗೊಂಡು ಈಗ ಗರಿಗೆದರಿವೆ. ಈಗ ಐದು ಕೆರೆಗಳ ಜಲವನ್ನು ತಂದು ಪೂಜಿಸಲಾಗಿದೆ, ಈಭಾಗದ ರೈತರ ಬದುಕು ಸಮೃದ್ದಿಗೊಳ್ಳುವ ಮೂಳಕ ಸಮೃದ್ದಿಯ ಸಂಕೇತವಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಜಲ ನಾಯಕ ಹಾಗೂ ಜನ ನಾಯಕ ಟಿ.ರಘುಮೂರ್ತಿ, ಈಭಾಗದ ಸಾಂಸ್ಕçತಿಕ ನಾಯಕನಾಗಿದ್ದಾನೆ, ತುಂಬಾ ವರ್ಷಗಳ ನಂತರ ಚಳ್ಳಕೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗರಿಗೆದರಿ, ರಾಜ್ಯದ ಎಲ್ಲಾ ಕಡೆ ತನ್ನ ಅಸ್ತಿತ್ವ ಹೊಂದಿದೆ, ಕನ್ನಡ ಭಾಷೆ ಶ್ರೀಮಂತ ಭಾಷೆ. ದೇಶದಲ್ಲಿ ಆರು ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ಸಿಕ್ಕಿದೆ ಅದರಲ್ಲಿ ಮೂರನೇ ಭಾಷೆ ನಮ್ಮದು, ಇದೇ ನಮ್ಮ ಕನ್ನಡಿಗರ ಹಿರಿಮೆ ಎಂದರು.
ಈದೇ ಸಂಧರ್ಭದಲ್ಲಿ ಕಸಾಪ.ಅಧ್ಯಕ್ಷ ಜಿಟಿ.ವೀರಭದ್ರಪ್ಪಸ್ವಾಮಿ, ಕಸಬಾ ಘಟಕದ ತಾಲೂಕು ಅಧ್ಯಕ್ಷ ದಯಾನಂದ, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್‌ಗೌಡ, ಮುಖ್ಯ ಶಿಕ್ಷಕರಾದ ಬಿಕೆ.ಮಾಧವ್, ಚಂದ್ರಣ್ಣ, ಮೊರಾರ್ಜಿ, ಪರ್ತಕರ್ತರ ಸಂಘದ ಅಧ್ಯಕ್ಷ ಟಿಜೆ.ತಿಪ್ಪೇಸ್ವಾಮಿ, ಹೆಚ್.ಎಸ್.ಸೈಯದ್, ಜಾನಪದ ಕಲಾವಿದರಾದ ಚಿತ್ತಮ್ಮ, ಕರಿಯಮ್ಮ ಇತರರು ಇದ್ದರು.

About The Author

Namma Challakere Local News
error: Content is protected !!