ಎಸ್‌ಟಿ ವಿರಾಟ್ ಸಮಾವೇಶಕ್ಕೆ ತೆರಳಿದ ಬಸ್ ಚಾಲಕ ಅಪಘಾತಕ್ಕೆ ಈಡಾಗಿ ಸಾವು : ಕನಿಷ್ಠ ಸಾಂತ್ವನ ಹೇಳದ ಬಿಜೆಪಿ ನಾಯಕರು
ಚಳ್ಳಕೆರೆ : ನ.20ರಂದು ಬಳ್ಳಾರಿಯಲ್ಲಿ ನಡೆದ ಎಸ್‌ಟಿ ವಿರಾಟ್ ಸಮಾವೇಶಕ್ಕೆ ತೆರಳಿದ ಬಸ್ ಚಾಲಕ ಅಫಘಾತಕ್ಕೆ ಈಡಾಗಿ ಮರಣ ಹೊಂದಿದ್ದಾನೆ.
ಇನ್ನೂ ಅಫಘಾತಕ್ಕೆ ತುತ್ತಾದ ಚಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ
ಚಿತ್ರದುರ್ಗ ಕೆಎಸ್ ಆರ್‌ಟಿಸಿ ಘಟಕ ಸಾರಿಗೆ ಬಸ್ ಚಾಲಕ ಉಮೇಶ್ 33ವರ್ಷ,ತೋರಣಗಟ್ಟೆ ಎಂದು ಗುರುತಿಸಲಾಗಿದೆ.
ಬಳ್ಳಾರಿಯಲ್ಲಿ ಎಸ್‌ಟಿ ವಿರಾಟ್ ಸಮಾವೇಶಕ್ಕೆ ಜಿಲ್ಲೆಯಿಂದ ನೂರಾರು ಬಸ್‌ಗಳ ಮೂಲಕ ಕಾರ್ಯಕರ್ತರು ತೆರಳಿದ್ದರು. ಆದರೆ ಸಮಾವೇಶದಿಂದ ವಾಪಸ್ಸ್ ಬರುವಾಗಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಸಮೀಪದ ಖಾಸಗಿ ಪೆಟ್ರೋಲ್ ಬಂಕ್ ಬಳಿ ರಸ್ತೆ ಮೇಲೆ ಇದ್ದ ಮಣ್ಣಿನ ಗುಡ್ಡೆ ಹಾಗೂ ತಿರುವು ಕಾಣದೆ ಅಪಘಾತಕ್ಕೆ ಸಿಲುಕಿ ಸಾವನಪ್ಪಿದ್ದಾನೆ ಎನ್ನಲಾಗಿದೆ.
ಇನ್ನೂ ಚಾಲಕನ ಕುಟುಂಬವು ಪರಿಹಾರಕ್ಕೆ ನೀಡಬೇಕು, ರಸ್ತೆ ಪ್ರಾಧಿಕಾರದ ಎಡವಟ್ಟಿನ ಮಣ್ಣಿನ ಗುಡ್ಡೆ ಕಾರಣ ಎಂದು ದೂರಿದ್ದಾರೆ, ಇನ್ನೂ ಬಿಜೆಪಿ ಸಮಾವೇಶಕ್ಕೆ ತೆರಳಿ ಸಾವನ್ನಪ್ಪಿದರೂ ಕೂಡ ಯಾವುದೇ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗಲಿ, ನಾಯಕರುಗಳು ಹಾಗಲಿ ತಿರುಗಿ ನೋಡಿಲ್ಲ ಎಂದು ಕುಟುಂಬದವರು ಆಳಲು ತೋಡಿಕೊಂಡರು.
ನಮ್ಮ ಚಳ್ಳಕೆರೆ ಟಿವಿ, ಈ ಘಟನೆಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ರವರನ್ನು ಗಮನ ಸೆಳೆದಾಗ