ಕಾಂಗ್ರೇಸ್ ಭದ್ರ ಕೋಟೆಗೆ ಕೇಸರಿ ನಾಯಕರ ಆಗಮನ
ಜನಸಂಕಲ್ಪ ಯಾತ್ರೆ ಮೂಲಕ ಚುನಾವಣೆಗೆ ಮುನ್ನುಡಿ
ಸಿಎಂ ಬೊಮ್ಮಯಿ ಆಗಮನಕ್ಕೆ ಈಡೀ ನಗರ ಕೇಸರಿ ಮಾಯ

ಕೈ ವಶದಲ್ಲಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ರಣತಂತ್ರ ಎಣೆದ ಬಿಜೆಪಿ

ಚಳ್ಳಕೆರೆ : ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಆಗಮನಕ್ಕೆ, ಈಡೀ ಚಳ್ಳಕೆರೆ ನಗರದ ಪ್ರಮುಖ ರಸ್ತೆಗಳು ಕೇಸರಿ ಬಾವುಟಗಳಿಂದ ತುಂಬಿವೆ.
ಇನ್ನೂ ಬಿಜೆಪಿ ನಾಯಕರ ಹಾಗೂ ಆಕಾಂಕ್ಷಿಗಳ ಪ್ಲೆಕ್ಸ್ ಬ್ಯಾನರ್ ಗಳು ರಾರಾಜಿಸುತ್ತಿವೆ,
ತಮ್ಮ ಪ್ರತಿಷ್ಠಿಯೆಯನ್ನು ಅಭಿವ್ಯಕ್ತಿಪಡಿಸುವ ಹಾಗೂ ರಾಜಕೀಯ ಅಕಾಡಕ್ಕೆ ಸಜ್ಜುಗೊಳಿಸು ಮುನ್ಸೂಚನೆಗಳು ಈಗಾಗಲೇ ಗರಿಗೆದರಿವೆ.

ಇನ್ನೂ ಚುನಾವಣಿಗೆ ಆರು ತಿಂಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ರಾಜಕೀಯ ರಣಕಹಳೆ ಮೊಳಗುತ್ತಿರುವುದು ಕಂಡು ಬಂದಿದೆ.
ಈದೇ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರಗಳಿಗೆ ಹೆಚ್ಚಿನ ಗಮನಹರಿಸುತ್ತಿರುವುದು ಕಂಡು ಬರುತ್ತಿದೆ.
ಆದರಂತೆ ಮಧ್ಯೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಕ್ಷೇತ್ರದಲ್ಲಿ ಐದು ಕ್ಷೇತ್ರಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡ ಬಿಜೆಪಿ ನಾಯಕರಿಗೆ ಚಳ್ಳಕೆರೆ ಕ್ಷೇತ್ರ ಮಾತ್ರ ತಲೆನೋವಾಗಿದೆ,
ಇಲ್ಲಿ ಕಳೆದ 2013ರಲ್ಲಿ ಆಯ್ಕೆಯಾದ ಕೈ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರದ ಕಳೆದ ಎರಡು ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಮೂಲಕ ಕ್ಷೇತ್ರದ ಇತಿಹಾಸಕ್ಕೆ ತಿರುವು ನೀಡಿದ್ದಾರೆ.
ಇನ್ನೂ ಈ ಬಾರಿ 2023ರ ಚುನಾವಣೆಯಲ್ಲಿ ಕೂಡ ಹ್ಯಾಟ್ರಿಕ್ ಜಯಗಳಿಸುವ ಎಲ್ಲಾ ಮುನ್ಸೂಚನೆಗಳು ಕಾಣಸಿಗುತ್ತಿವೆ ಇಂತಹ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಜನಸಂಕಲ್ಪ ಯಾತ್ರೆ ಎಂಬ ಸಮಾವೇಶ ಮೂಲಕ ಈಡೀ ನಗರವನ್ನು ಕೇಸರಿಮಯ ಮಾಡಿದೆ.

ಇನ್ನೂ ಚಳ್ಳಕೆರೆ ಕ್ಷೇತ್ರದಲ್ಲಿ ಈಗಾಗಲೇ ಸುಮಾರು ಅರ್ಧ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬಂದು ಹೋಗುವುದು ಮಾಮೂಲು ಹಾಗಿದೆ, ಇನ್ನೂ ಕ್ಷೇತ್ರದ ತುಂಬೆಲ್ಲಾ ಜನ ಮಾನಸದಲ್ಲಿ ಹಾಸುಹೊಕ್ಕಾಗಿ ಜನಪರ ಕಾಳಜಿ ಯಿಂದ ಸಕ್ರಿಯವಾಗಿ ತನ್ನ ಕಾರ್ಯದಲ್ಲಿ ತೊಡಗಿದೆ ಸೇವೆಯಲ್ಲಿರುವ ಅಧಿಕಾರಿಯೊಬ್ಬರು ಬಿಜೆಪಿಗೆ ತಂದರೆ ಕೈ ವಶದಲ್ಲಿರುವ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ರಾಜ್ಯ ನಾಯಕರ ಒಪಂದ ಕೂಡ ಅಲ್ಲಗಳೆಯುವಂತಿಲ್ಲ,
ಒಟ್ಟಾರೆ ಈ ಬಾರಿ ಕೈ ವಶದಲ್ಲಿರುವ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತರಲು ಜನಸಂಕಲ್ಪ ಯಾತ್ರೆ ಮೊದಲ ಹಂತದ ತಿರುವು ಪಡೆದುಕೊಳ್ಳಲಿದೆ ಎನ್ನಲಾಗಿದೆ.

About The Author

Namma Challakere Local News
error: Content is protected !!