ಕೈ ವಶದಲ್ಲಿದ್ದ ಚಳ್ಳಕೆರೆ ಕ್ಷೇತ್ರಕ್ಕೆ ರಣತಂತ್ರ ಎಣೆದ ಬಿಜೆಪಿ
ಚಳ್ಳಕೆರೆ : ನಾಳೆ ನಡೆಯುವ ಜನ ಸಂಕಲ್ಪ ಯಾತ್ರೆ ಈಡೀ ಕ್ಷೇತ್ರದ ದಿಕ್ಸೂಚಿಯಾಗಲಿದೆ, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಈ ಜನ ಸಂಕಲ್ಪ ಯಾತ್ರೆ ಮಹತ್ವದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಬಿಜೆಪಿ ಕಾರ್ಯಲಾಯದಲ್ಲಿ ಜನ ಸಂಕಲ್ಪ ಯಾತ್ರೆಯ ಪೂರ್ವಭಾವಿಯಾಗಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು, ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ನಾಳೆ ಹಿಂದಿನ ಕಾಲದಲ್ಲಿ ರಾಜ ಓಡೆಯರು ಕಟ್ಟಿಸಿದ ರಾಣಿಕೆರೆ ಹಲವು ವರ್ಷಗಳ ನಂತರ ಕೆರೆ ತುಂಬಿಕೊಡಿ ಬಿದ್ದ ಹಿನ್ನಲೆಯಲ್ಲಿ ಬಾಗೀನ ಅರ್ಪಿಸಲು ಆಗಮಿಸುತ್ತಿರುವುದು ಸಂತಸ ತಂದಿದೆ,
ಆದ್ದರಿAದ ಕ್ಷೇತ್ರದ ಸಾರ್ವಜನಿಕರು, ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನ ಸಂಕಲ್ಪ ಯಾತ್ರೆ ಯಶಶ್ವಿಸಿಗೊಳಿಸಬೇಕು ಎಂದು ಕರೆ ನೀಡಿದರು.
ಇನ್ನೂ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ನಮ್ಮ ಬಿಜೆಪಿ ಪಕ್ಷದ ಆಡಳಿತವನ್ನು ನೋಡಿದ ಕಾಂಗ್ರೇಸಿಗರು ಭಯಪಡುವಂತಾಗಿದೆ, ಇನ್ನೂ ಮೀಸಲಾತಿ ಹೇಸರಲ್ಲಿ ಕಳೆದ 75ವರ್ಷ ಆಳ್ವಿಕೆ ಮಾಡಿದ ಕಾಂಗ್ರೇಸ್ ಸಂಪೂರ್ಣವಾಗಿ ನೆಲ ಸಮ ಮಾಡಬೇಕು ಎಂಬುದು ನಮ್ಮ ಮೋದಿಯ ಕನಸು ಅದರಂತೆ ಈಗಾಗಲೇ ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಬೇಟಿ ನೀಡಿದ ನಮ್ಮ ವರಿಷ್ಠರು ನಾಳೆ ಚಳ್ಳಕೆರೆ ಕ್ಷೇತ್ರದಲ್ಲಿ ಆಗಮಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮುರುಳಿ, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಜಿಲ್ಲಾ ಕಾರ್ಯದರ್ಶಿ ಜಯಪಾಲಯ್ಯ, ಎಂ.ಎಸ್.ಜಯರಾA, ಆರ್.ಅನಿಲ್ ಕುಮಾರ್, ವೆಂಕಟೇಶ್ ಯಾದವ್, ಸೋಮಶೇಖರ್ ಮಂಡಿಮAಠ್, ಬಸವರಾಜ್, ಇತರರು ಇದ್ದರು.