ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಜೆ ಆರ್ ರವಿಕುಮಾರ್
ನಾಯಕನಹಟ್ಟಿ:: ಮೂಲಭೂತ ಸೌರ‍್ಯಗಳಿಂದ ವಂಚಿತವಾದ ಗ್ರಾಮಗಳಿಗೆ ಸ್ವಚ್ಛತೆ ಮತ್ತು ಆರೋಗ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನೊಂದ ಸಂತ್ರಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು ಎಂದು ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್ ಹೇಳಿದ್ದಾರೆ.
ಅವರು ಶನಿವಾರ ಪಟ್ಟಣದ ಸಂತ್ರಸ್ತರು 9ನೇ ಮತ್ತು ಎಂಟನೇ ವರ‍್ಡಿನ ಶಾಲೆ ಆವರಣ ರಸ್ತೆ ಬದಿ ಮತ್ತು ಪೊಲೀಸ್ ಠಾಣೆ ಸುತ್ತಮುತ್ತ ಸ್ವಚ್ಛತೆಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಪೀಪಲ್ ರ‍್ಗನೈಜೆಶನ್ ಮತ್ತು ಗೂಂಜ್ ಜಂಟಿಯಾಗಿ ಗೊಂಜ್ ಕಿಟ್ಟುಗಳನ್ನು ಸಂಸ್ಥೆಯ ವತಿಯಿಂದ ರ‍್ಪಡ್ಸಿದ್ದ ಕಿಕ್ ವಿತರಣೆ ಕರ‍್ಯಕ್ರಮದಲ್ಲಿ ಭಾಗವಹಿಸಿ ಕಿಟ್ ವಿತರಣೆ ಮಾಡಿ ಮಾತನಾಡಿದ್ದಾರೆ.
ಪೀಪಲ್ಸ್ ಸಂಸ್ಥೆಯು ಬಡ ಜನರಿಗೆ ಈ ರೀತಿಯ ಆಹಾರ ಕಿಟ್ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ ನಮ್ಮ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದಂತಹ ಚಿಕ್ಕಕೆರೆ ದಟ್ಟವಾಗಿ ಸಿಮಿಜಾಲೆ ಗಿಡಗಳು ತುಂಬಿವೆ ಪೀಪಲ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಚಿಕ್ಕಕೆರೆಯ ಸ್ವಚ್ಛತಾ ಕರ‍್ಯ ಮಾಡಿಸಿದಲ್ಲಿ ನಮ್ಮ ಸಹಕಾರ ಸ್ಥಳೀಯರ ಸಹಕಾರ ಇದ್ದಇರುತ್ತೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ತಿಳಿಸಿದ್ದಾರೆ.
ಈ ವೇಳೆ ಪೀಪಲ್ ಸಂಸ್ಥೆಯ ಎಲ್ ಮಂಜುನಾಥ್ ಮಾತನಾಡಿ ನಾವು ಪೀಪಲ್ ಮತ್ತು ಗೂಂಜ್ ಎರಡು ಸಂಸ್ಥೆಯ ಸಹಯೋಗದಲ್ಲಿ ಕಿಟ್ ವಿತರಣೆ ಮಾಡಲಾಗಿದೆ ನಿಮ್ಮ ಗ್ರಾಮದಲ್ಲಿ ವಠಾರ ಕಾಲೋನಿಗಳಲ್ಲಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಾವು ಕೊಟ್ಟಂತಹ ಕಿಟ್ಟುಗಳನ್ನ ಬಳಸಿಕೊಳ್ಳಿ ನಿಮ್ಮ ಗ್ರಾಮದ ಸ್ವಚ್ಛತೆಯ ಕಾಪಾಡಿಕೊಳ್ಳಿ ಇದರ ಉದ್ದೇಶ ಇಷ್ಟೇ ನಿಮಗೂ ಪರಿಸರದ ಬಗ್ಗೆ ಕಾಳಜಿ ಇರಲಿ ಎಂಬ ಉದ್ದೇಶವಾಗಿದೆ ಎಂದು ಪೀಪಲ್ ಸಂಸ್ಥೆಯ ಎಲ್ ಮಂಜುನಾಥ್ ತಿಳಿಸಿದ್ದಾರೆ
ಈ ಸಂರ‍್ಭದಲ್ಲಿ ಸಮೃದ್ಧಿ ಕೋ ಆಪರೇಟರ್ ಬ್ಯಾಂಕ್ ಅಧ್ಯಕ್ಷ ಕೆ ಕಲ್ಲೇಶ್ ಆರ್ ತಿಪ್ಪೇಸ್ವಾಮಿ, ರಮೇಶ್ ಕುಮಾರ್, ಸೇರಿದಂತೆ ಸಂತ್ರಸ್ತರು ಭಾಗವಹಿಸಿದ್ದರು