ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಇಂದಿರಾಗಾAಧಿಯ 105ನೇ ಜನ್ಮ ದಿನಾಚರಣೆಗೆ ಸು.25.ಕೆಜಿ,ಕೇಕ್ ಕತ್ತರಿಸುವ ಆಚರಣೆ

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಶ್ರೀಮತಿ ಇಂದಿರಾಗಾAಧಿಯ 105ನೇ ಜನ್ಮ ದಿನಾಚರಣೆಯಲ್ಲಿ ಸುಮಾರು 25.ಕೆಜಿಯಷ್ಟು ಕೇಕ್ ಕತ್ತರಿಸುವ ಮೂಲಕ ಈ ಬಾರಿ ವಿಷೇಶವಾಗಿ ಜನ್ಮ ದಿನಾಚರಣೆ ಆಚರಿಸಿದರು,.
ಇನ್ನೂ ತಾಲೂಕಿನಿಂದ ಹೆಣ್ಣು ಮಕ್ಕಳೆ ಹೆಚ್ಚಿನದಾಗಿ ಆಗಮಿಸಿರುವುದು ವಿಷೇಶವಾಗಿ ಕಂಡು ಬಂದಿತು. ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವಹಿಸಿದ್ದರು.
ಈಡೀ ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಮೀಸಲಾಗಿದ್ದ ಕಾರ್ಯಕ್ರದಮಲ್ಲಿ ಅಧ್ಯಕ್ಷತೆ ವಹಿಸಿದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಶ್ರೀಮತಿಇಂದಿರಾ ಗಾಂಧಿರವರು ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ರಾಜಧನ ರದ್ದತಿ ಬಡವರ ಪರವಾದ ನೀತಿಗಳನ್ನು ಅನುಸರಿಸಿ, ಅವರು 1969ರಲ್ಲಿ 14ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಮತ್ತು ಹಿಂದಿನ ರಾಜರ “ಖಾಸಗಿ ಕೊಡಿಗೆ ಹಣದ” ಅನುದಾನವನ್ನು ರದ್ದುಗೊಳಿಸಿದ ಉಕ್ಕಿನ ಮಹಿಳೆ ಇಂದಿರಾಗಾAಧಿಯಾಗಿದ್ದರು ಎಂದು ಸ್ಮರಿಸಿದರು.
ಇನ್ನೂ ಮಾಜಿ ಜಿಲ್ಲಾ ಪಂಚಾಯಿತ್ ಅಧ್ಯಕ್ಷ ಗೀತಾ ನಂದಿನ ಗೌಡ ಮಾತನಾಡಿ, ಶ್ರೀಮತಿ ಗಾಂಧಿ ಅವರು ಪಕ್ಷದ ಪ್ರಬಲ ವಿಭಾಗದ ನಿರ್ವಿವಾದ ನಾಯಕರಾದರು. ಪುನರಾವಲೋಕನದಲ್ಲಿ, ‘ಗರಿಬಿ ಹಟಾವೊ’ ವಾಕ್ಚಾತುರ್ಯವು ಆಡಂಬರವಿಲ್ಲದ ಮತ್ತು ಸರಳವಾದ ನಿತಿಯಾಗಿ ಕಂಡುಬAದಿತು. ಆದರೆ ಭಾರತೀಯ ರಾಜಕೀಯದಲ್ಲಿ ಮೊದಲ ಬಾರಿಗೆ ಬಡವರ ಕಳವಳಗಳನ್ನು ನೇರವಾಗಿ ಪರಿಹರಿಸಲು ಪ್ರಯತ್ನಿಸಲಾಗಿತ್ತು, ಎಂದರು.
ಇದೇ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ ಮಾತನಾಡಿ, ಇಡೀ ರಾಜ್ಯದಲ್ಲಿ ಸುಮಾರು 6ಸಾವಿರ ಮಕ್ಕಳ ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪಿರುವುದು ವರದಿಯಾಗಿದೆ ಈಗೀನ ರಾಜ್ಯ ಸರಕಾರ ಯಾವ ನಡೆ ಸಾಗುತ್ತಿದೆ ಎಂಬುದು ತಿಳಿಯದಾಗಿದೆ, ಇದರಿಂದ ದೇಶದ ಚುಕ್ಕಾಣಿ ಹಿಡಿದು ಬಿಜೆಪಿ ಸರಕಾರ ಈ ದೇಶದಿಂದ ತೊಲಗಿಸುವ ಸಂಕಲ್ಪ ಮಾಡಿ, ಈದೇಶದಲ್ಲಿ ಶಾಂತಿ ನೆಮ್ಮದಿಗೆ ಇರಬೇಕಾದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜಾಕೀಯ ಬಣ್ಣ ಬೆರೆಸಿದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ, ನಮ್ಮ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸಚಿವರು ಆಗುವುದು ಸಿದ್ಧ, ಮತದಾರರಿಗೆ ಅರಿಶಿನ ಕುಂಕುಮ ಇಟ್ಟು ಮತ ಪಡೆಯಿರಿ ಎಂದು ನೆರೆದಿದ್ದ ಮಹಿಳೆಯರಿಗೆ ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ನಂದಿನಿ ಗೌಡ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಗೀತಾ ಬಾಯಿ, ಪರಶುರಾಮ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಅನಿತಮ್ಮ, ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ ಕುಮಾರ್, ಹಾಗೂ ನಗರಸಭೆ ಸದಸ್ಯರುಗಳಾದ ಪ್ರಕಾಶ್, ಮಲ್ಲಿಕಾರ್ಜುನ, ಕವಿತಾ ಬೋರೆಯ್ಯ, ಸುಜಾತ ಪ್ರಹ್ಲಾದ್, ಸುಮಾ ಭರಮಯ್ಯ, ಜಯಲಕ್ಷ್ಮಿ ಕೃಷ್ಣಮೂರ್ತಿ, ರಾಘವೇಂದ್ರ, ಕವಿತಾ ವೀರೇಶ್, ಸಾವಿತ್ರಿ, ವಿರೂಪಾಕ್ಷಿ, ಚಳ್ಳಕೆರಪ್ಪ, ರಮೇಶ್ ಗೌಡ, ವೀರಭದ್ರಯ್ಯ, ಜೈತುಂಬಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ್‌ಮೂರ್ತಿ, ಮುಖಂಡರುಗಳಾದ ಎಚ್ಎಸ್ ಸೈಯದ್, ಚೌಳೂರು ಪ್ರಕಾಶ್, ಸಿಟಿ ಶ್ರೀನಿವಾಸ್, ಪಿಟಿ ತಿಪ್ಪೇಸ್ವಾಮಿ, ಅನ್ವರ್ ಮಾಸ್ಟರ್, ಡಿಕೆ ಕಾಟಯ್ಯ, ಹಿರಿಯ ಮುಖಂಡರಾದ ಟಿಎಟಿ ಪ್ರಭುದೇವ್, ಪರಶುರಾಂಪುರ ಕಾಂಗ್ರೆಸ್ ಅಧ್ಯಕ್ಷರಾದ ಟಿ ಆರ್ ಕಿರಣ್ ಶಂಕರ್, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!