ಚಳ್ಳಕೆರೆ ವಿಧಾನ ಸಭಾಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷದಿಂದ ಭರ್ಜರಿ ಪಕ್ಷಸಂಘಟನೆ : ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಹೇಳಿಕೆ

ಚಳ್ಳಕೆರೆ : ರಾಜ್ಯದಲ್ಲಿ ಆಮ್‌ಆದ್ಮಿ ಪಕ್ಷ ಸಂಘಟನೆಗೆ ಈಗಾಗಲೇ ಕಾರ್ಯಕರ್ತರು ಒಲವು ತೋರಿದ್ದು ಮುಂದಿನ ಚುನಾವಣೆಗೆ ಈಗಾಗಲೇ ತಯಾರಿ ನಡೆಯುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಬಿ.ಪಾಪಣ್ಣ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಪಕ್ಷಕ್ಕೆ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ.
ರಾಜ್ಯದಲ್ಲಿ ಆಳ್ವಿಕೆ ನಡೆಸುವ ಸರಕಾರಗಳು ದುರಾಡಳಿತದಿಂದ ಕೂಡಿವೆ, ಇಂತಹ ಪಕ್ಷ ಪ್ರೇರಿತ ಸರಕಾರಗಳನ್ನು ಕಿತ್ತೋಗೆಯಲು ಆಮ್‌ಆದ್ಮಿ ಪಕ್ಷ ದೃಡಸಂಕಲ್ಪ ಮಾಡಿದೆ ಆದ್ದರಿಂದ ಚುನಾವಣೆಗೆ ಇನ್ನೂ ಆರು ತಿಂಗಳ ಬಾಕಿ ಇರುವಾಗಲೆ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಆಮ್‌ಆದ್ಮಿ ಪಕ್ಷದ ಯುವ ಮುಖಂಡರಾದ ಓಬಳೇಶ್ ಮಾತನಾಡಿ, ನಗರ ಮಟ್ಟದ ಅಭಿಯಾನ ಕಾರ್ಯಕ್ರಮದ ಆಯೋಜನೆ ನಡೆಯುತ್ತಿದೆ, ಚಳ್ಳಕೆರೆ ನಗರದಲ್ಲಿ ಒಟ್ಟು 31ವಾರ್ಡ್ಗಳು ಇವೇ ಪ್ರತಿ ವಾರ್ಡ್ಗೆ ಭೇಟಿ ಕೊಡಬೇಕು ಮತ್ತು ಪ್ರತಿ ಮನೆಗೆ ಒಬ್ಬೊಬ್ಬರಂತೆ ಸದಸ್ಯತ್ವ ಕೊಡಿಸುವುದರ ಮೂಲಕ ಪಕ್ಷವನ್ನು ಸಂಘಟಿಸಬೇಕಿದೆ, ಪ್ರತಿ ಹಳ್ಳಿಗಳಿಗೆ ಭೇಟಿ ಕೊಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆಮ್‌ಆದ್ಮಿ ಪಕ್ಷದ ಯುವ ಮುಖಂಡರಾದ ಓಬಳೇಶ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಕೆ ಶ್ರೀನಿವಾಸ್, ನಗರ ಯುವ ಘಟಕದ ಅಧ್ಯಕ್ಷ ಸುರೇಶ್, ಯುವ ಮುಖಂಡರಾದ ಮಂಜುನಾಥ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಓಬಯ್ಯ, ಮೊಳಕಾಲ್ಮೂರು ತಾಲ್ಲೂಕಿನ ಯುವ ಮುಖಂಡರಾದ ತಮ್ಮಣ್ಣ, ಮತ್ತು ಆಮ್‌ಆದ್ಮಿ ಪಕ್ಷದ ಮುಖಂಡರಾದ ಓಂಕಾರಮೂರ್ತಿ, ರಾಜು ಬೆಳಗೆರೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು

About The Author

Namma Challakere Local News
error: Content is protected !!