ನ.23ರಿಂದ 5ದಿನಗಳ ಕಾಲ ನಗರದಲ್ಲಿ ಕನ್ನಡ ಸಾಹಿತ್ಯ ಪಂಚಾಮಿ ಹಬ್ಬ : ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ಹೇಳಿಕೆ
ಚಳ್ಳಕೆರೆ : ಗಡಿ ಭಾಗದಲ್ಲಿ ಕನ್ನಡ ಉಳಿವಿಗೆ ನಿರಂತರ ಹೋರಾಟಗಳು ನಡೆಯುತ್ತಿವೆ, ಆದೇ ರೀತಿಯಲ್ಲಿ ನಮ್ಮ ಚಳ್ಳಕೆರೆ ತಾಲೂಕು ಆಂದ್ರದ ಗಡಿ ಅಂಚಿಕೊAಡಿರುವುದರಿAದ ಇಲ್ಲಿ ವಿಪಯಾರ್ಸ ಆದ್ದರಿಂದ ಅನ್ಯ ಭಾಷಿಗರ ಹಾವಳಿಯಿಂದ ಕನ್ನಡ ಉಳಿವಿಗೆ ಕನ್ನಡ ಮನಸ್ಸುಗಳು ಹೊಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಇದೇ ನವೆಂಬರ್ ನ.23ರಿಂದ 27ರವರೆಗೆ ಐದು ದಿನಗಳ ಕಾಲ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಐದು ದಿನದ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪಂಚಾಮಿ ಎಂಬ ಟ್ಯಾಗ್‌ಲೈನ್ ಮೂಲಕ ಪ್ರತಿ ದಿನಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯ ನುಡಿಯನ್ನು ಆಯೋಜಿಸಲಾಗಿದೆ.
ಇನ್ನೂ ತಾಲೂಕಿನ ನಾಲ್ಕು ಹೊಬಳಿಗಳ ಕನ್ನಡ ಸಾಹಿತ್ಯ ಘಟಕಗಳಾಗಿ ವಿಭಾಗಿಸಿ ಕನ್ನಡ ಮನಸ್ಸುಗಳನ್ನು ಸೆಳೆಯುವ ಕೆಲಸವಾಗುತ್ತದೆ, ಇದರಿಂದ ಈಡೀ ತಾಲೂಕಿನಲ್ಲಿ ಕನ್ನಡ ಉಳಿವಿಗೆ ಕನ್ನಡ ನಾಡು, ನುಡಿ, ಭಾಷೆ ಗೆ ಹೆಚ್ಚಿನ ಆಧ್ಯತೆ ನೀಡುವುದರ ಮೂಲಕ ಕನ್ನಡ ಸಾಹಿತ್ಯ ಪಂಚಾಮಿ ಕಾರ್ಯಕ್ರಮ ನಡೆಯುತ್ತದೆ ಎಂದಿದ್ದಾರೆ.
ಇನ್ನೂ ತಾಲೂಕು ಘಟಕ ಅಧ್ಯಕ್ಷ ದಯಾನಂದ ಮಾತನಾಡಿ ಈಡೀ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸುವ ಕಾರ್ಯ ಹಾಘುತ್ತದೆ, ಆದ್ದರಿಂದ ತಾಲೂಕಿನಲ್ಲಿ ಇರುವ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶ್ವಿಸಿಗೆ ಕಾರಣಿ ಭೂತರಾಗಬೇಕು ಎಂದು ಕರೆ ನಿಡಿದ್ದಾರೆ.
ಬಾಕ್ಸ್ ಮಾಡಿ :
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ತುಂಬಾ ಕಡಿಮೆ ಇದೆ ಆದ್ದರಿಂದ ಈಡೀ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಸದಸ್ಯರ ಅಭಿಯಾನ ಮಾಡಲು ಸಜ್ಜಾಗಿದೆ. ಈಡೀ ಚಳ್ಳಕೆರೆ ಕನ್ನಡ ಮನಸ್ಸುಗಳು ಅಜೀವ ಸದಸ್ಯ ಪಡೆಯಲು ಅವಕಾಶ ಕಲ್ಪಿಸಿದೆ. ಪ್ರತಿಯೊಬ್ಬರು 450 ರೂ.ಗಳ ಸದಸ್ಯ ನೊಂದಣಿ ಶುಲ್ಕ ನೀಡಿ ಸದಸ್ಯತ್ವ ಪಡೆಯಬಹುದು.
ಇದೇ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಚಿತ್ತಯ್ಯ, ಕಸಬಾ ಘಟಕದ ಧ್ಯಕ್ಷ ದಯಾನಂದ್, ಪ್ರಧಾನ ಕಾರ್ಯದರ್ಶಿ ಮಲ್ಲೆಶ್, ಟಿ.ಶಿವಕುಮಾರ್ ಇತರರು ಇದ್ದರು.