ಕನಕದಾಸರ ಜಯಂತಿ ಹಾಗೂ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವ
ಜೊತೆ ಜೊತೆಗೆ ಆಚರಿಸುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : 535ನೇ ಕನಕದಾಸರ ಜಯಂತಿ ಹಾಗೂ ಪ್ರಥಮ ವರ್ಷದ ವೀರ ವನಿತೆ ಓಬವ್ವ ಈ ಇಬ್ಬರು ಮಹನೀಯರ ಜಯಂತೋತ್ಸವ ಜೊತೆ ಜೊತೆಗೆ ಆಚರಿಸುವುದು ನಮ್ಮ ಸುದೈವ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಸರಳ ಕನಕದಾಸರ, ಹಾಗೂ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ನಂತರ ಮಾತನಾಡಿದ ಅವರು ಕನಕದಾಸರು ಕಿರ್ತನೆಗಳ ಮೂಲಕ ಈಡೀ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ,
ಮಹಿಳೆಯರು ಬಗ್ಗೆ ಬೆಳಕು ಚೆಲ್ಲುತ್ತಾ, ಜಾತಿ ಪದ್ದತಿ ಶೂದ್ರರು ಎಂಬ ಪದ್ದತಿ ತೊಡೆದು ಹಾಕಿ, ಉಡುಪಿಯಲ್ಲಿ ತಮ್ಮ ಇಷ್ಟ ದೇವ ಶ್ರೀ ಕೃಷ್ಣಾನನ್ನು ತನ್ನ ಭಕ್ತಿಯ ಮೂಲಕ ತನ್ನತ್ತ ತಿರುಗಿಸಿದ ಮಹಾನ್ ದಾಸರಾಗಿದ್ದಾರೆ,
ಅವರಂತೆ ಈಡೀ ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಮುತ್ತಿಗೆ ಹಾಕಿದ ಸಂಧರ್ಭದಲ್ಲಿ ವೀರವೇಶದಲ್ಲಿ ಹೊರಾಡಿ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಡಿದ ಮಹಿಳೆ ವೀರವನಿನೆ ಓಬವ್ವ ಒಬ್ಬರು ಎಂದರು.
ಇನ್ನೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ, ತಹಶಿಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ದಾಸರಲ್ಲಿ ಅತೀ ಶ್ರೇಷ್ಠತೆಯನ್ನು ಹೊಂದಿರುವ ಕನಕ ದಾಸರು ತುಳಿತಕ್ಕೆ ಹೊಳಗಾದವರನ್ನು ಶೋಷಿತರ ಬಗ್ಗೆ ಕೀರ್ತನೆಗಳನ್ನು ಹಾಡುವುದರ ಮೂಲಕ ಜನಾಂಗೀಯ ಮೆಲ್ತಸ್ತರಕ್ಕೆ ತಂದವರು. ಇನ್ನೂ ಪ್ರಥಮ ವರ್ಷದ ಜಯಂತೋತ್ಸವ ಆಚರಿಸಿಕೊಳ್ಳುತ್ತಿರುವ ಚಿತ್ರದುರ್ಗ ಪರಂಪರೆಯ ಹಿರಿಮೆಯನ್ನು ಈಡೀ ಜಗತ್ತಿಗೆ ಸಾರಿದ ಓಬವ್ವನ ಇತಿಹಾಸದ ಕುರುವುಗಳು ನಮ್ಮ ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು ಎಂದು ಸ್ಮರಿಸಿದರು.
ಚಲುವಾದಿ ಸಮಾಜದ ನಿಜಲಿಂಗಪ್ಪ ಮಾತನಾಡಿ, ಅಡುಗೆ ಮನೆಯಲ್ಲಿ ಚೌಟು ಹಿಡಿಯುವ ಕೈ, ಕಲ್ಲಿನ ಕೋಟೆಯಲ್ಲಿ ಓನಕೆ ಹಿಡಿದು ಶತ್ರು ನಾಶಪಡಿಸಿದ ವೀರ ಮಹಿಳೆ ಓಬವ್ವ ಎಂದರು.
ಯುವ ಘಟಕದ ರಾಜು ಮಾತನಾಡಿ, ಚಿತ್ರದುರ್ಗ ಇತಿಹಾಸದಲ್ಲಿ ಸುವರ್ಣ ಅಕ್ಷರಗಳನ್ನು ಬರೆದಿಡುವ ಕಾಲ ಇದಾಗಿದೆ, ಈಡೀ ಜಗತ್ತಿಗೆ ಶೋಷಿಸಿತ ಜನಾಂಗದ ಧ್ವನಿಯಾಗಿ ಕಹಳೆ ಊದುವ ಸಮಾಜದ ಮಹಿಳೆ ವೀರತನ ಹೋರಾಟ ಇಂದು ಸ್ಮರಿಸುವಂತಾಗಿದೆ.
ಇದೇ ಸಂಧರ್ಭದಲ್ಲಿ ಇನ್ನೂ ಕುರುಬ ಸಮಾಜದ ಮಲ್ಲೆಶಪ್ಪ ಮಾತನಾಡಿದರು, ಕೆಎಂಎಪ್ ನಿರ್ದೇಶಕ ಬಾಬಣ್ಣ, ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯ ರಮೇಶ್, ಮಲ್ಲಿಕಾರ್ಜುನ, ರಾಘವೇಂದ್ರ, ಕವಿತಾ, ಸುಮಾ, ಚಳ್ಳಕೆರೆಪ್ಪ, ಕೆ.ವೀರಭದ್ರಪ್ಪ, ಕುರುಬ ಸಮಾಜದ ಮಲ್ಲೆಶಪ್ಪ, ನಿಜಲಿಂಗಪ್ಪ, ದೇವರಾಜ್, ಕೃಷ್ಣಾ ಮೂರ್ತಿ, ದೊಡ್ಡ ರಂಗಪ್ಪ, ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಸಿ. ಚಂದ್ರಪ್ಪ, ಕೃಷಿ ಅಧಿಕಾರಿ ಅಶೋಕ, ರೇಷ್ಮೆ ಅಧಿಕಾರಿ ಕೆಂಚಾಜಿರಾವೋ, ಪಶು ಇಲಾಖೆ ಅಧಿಕಾರಿ ಡಾ.ರೇವಣ್ಣ, ತಾಲೂಕು ಮಟ್ಟದ ಅಧಿಕಾರಿಗಳು , ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!