ಉಚಿತ ವಿದ್ಯುತ್ ಸೌಲಭ್ಯ ಪಡೆಯಲು : ಚಳ್ಳಕೆರೆ ಬೆಸ್ಕಾಂ ಎಇಇ ರಾಜು ಮನವಿ
ಚಳ್ಳಕೆರೆ : ಪರಿಶಿಷ್ಟ ಜಾತಿ | ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ
ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ಮಾಸಿಕ 75 ಯೂನಿಟ್‌ಗಳವರೆಗಿನ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಚಳ್ಳಕೆರೆ ಬೆಸ್ಕಾಂ ಎಇಇ ರಾಜು ಮನವಿ ಮಾಡಿಕೊಂಡಿದ್ದಾರೆ.
ನಗರದ ಬೆಸ್ಕಾಂ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರ
ಸರಕಾರದ ಆದೇಶದಂತೆ ಎಸ್ಸಿ, ಹಾಗೂ ಎಸ್ಟಿ ಎಲ್ಲಾ ಫಲಾನುಭವಿಗಳು ಇದರ ಸದುಪಯೊಗ ಪಡೆದುಕೊಳ್ಳಬೇಕು,
ಸರಕಾರದ ಆದೇಶದನ್ವಯ ಸೌಲಭ್ಯವನ್ನು ಪಡೆಯಲಿಚ್ಚಿಸುವ ಅರ್ಹ ಗ್ರಾಹಕರು, ಅಗತ್ಯ ದಾಖಲೆಗಳೊಂದಿಗೆ ಸಮೀಪದ ಬೆವಿಕಂ ಉಪವಿಭಾಗದಲ್ಲಿ ಅರ್ಜಿ ಸಲ್ಲಿಸಿ ಸದರಿ ಸೌಲಭ್ಯವನ್ನು ಪಡೆಯಲು ಸೂಚಿಸಿದ್ದಾರೆ.
ಅಗತ್ಯ ದಾಖಲೆಗಳು :
- ಬಿಪಿಎಲ್ / ರೇಷನ್ ಕಾರ್ಡ್ (RC ಸಂಖ್ಯೆ ಸಹಿತ) ಜೆರಾಕ್ಸ್ ಪ್ರತಿ
- ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
- ಜಾತಿ ಪ್ರಮಾಣ ಪತ್ರ (R.D. ಸಂಖ್ಯೆ ಸಹಿತ) ಜೆರಾಕ್ಸ್ ಪ್ರತಿ
- ಬ್ಯಾಂಕ್ ಖಾತೆ ಸಂಖ್ಯೆ: IFSC Code ಇತ್ಯಾದಿ ವಿವರಗಳನ್ನೊಳಗೊಂಡ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ
ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಆನೈನ್ (Online) ಮುಖಾಂತರ ಕರ್ನಾಟಕ
ಸರ್ಕಾರದ SUVIDHA (App/Online Web Portal) ನಲ್ಲಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ.