ಅದಗೆಟ್ಟ ರಸ್ತೆಗೆ..! ನಗರಸಭೆ ಕರುಣಿಸುವುದೋ
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಮಳೆ ಬಂದರೆ ಸಾಕು ರಸ್ತೆ ಮೇಲೆ ನೀರು, ಚರಂಡಿಗಳಿಲ್ಲದೆ..! ವಾಸದ ಮನೆಗಳಿಗೆ ನುಗ್ಗುವ ಮಳೆನೀರು, ಮಕ್ಕಳಿಂದ ಇಡಿದು ವಯೋವೃದ್ದರವರೆಗೂ ಸಂಕಷ್ಟದ ಪರಸ್ಥಿತಿ ಎದುರಿಸುವಂತಾಗಿದೆ
ಅಂಗನವಾಡಿಗಳ ಸಂಕಷ್ಟ :
ನಾಲ್ಕು ವಾರ್ಡ್ಗಳ ಮಕ್ಕಳು ಇದೇ 18ನೇ ವಾರ್ಡ್ನ ಅಂಗನವಾಡಿಗಳ ಸಮುಚ್ಚಯಕ್ಕೆ ಬರವ ಅನಿವಾರ್ಯತೆ ಇದೆ ಇದರಿಂದ ಆ ಎಲ್ಲಾ ಮಕ್ಕಳ ಸೌಲಭ್ಯಕ್ಕೂ ಇದೇ ವಾರ್ಡ್ ನ ಸದಸ್ಯ ಸ್ಪಂಧಿಸುವ ಅನಿವಾರ್ಯತೆ ಕೂಡ ಎದುರಾಗಿದೆ. ಇದೆ ಈಗೇ ಸ್ಲಂ ಬೋರ್ಡ್ಗಳ ಸಮಸ್ಯೆ ನೂರೆಂಟು, ಆದರೆ ಅನುದಾನ ಮಾತ್ರ ಕಡಿಮೆ ಈಗೇ ವಿಶೇಷ ಅನುದಾನ ನೀಡುವ ಮೂಲಕ ಸ್ಲಂಗಳ ಅಭಿವೃದ್ಧಿ ನಗರಸಭೆ ಅಧ್ಯಕ್ಷರು ಕಂಕಣ ಬದ್ದರಾಗುತ್ತಾರೋ ಕಾದುನೋಡಬೇಕಿದೆ.
ಬಾಕ್ಸ್ ಮಾಡಿ :
1.ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು ಅನುದಾನ ತಂದು ಪ್ರಗತಿಯತ್ತ ಕೊಂಡುಯ್ಯುತ್ತಿದ್ದೆನೆ, ಪ್ರಸ್ತುತ ನಗರಸಭೆಯಲ್ಲಿ ಸುಮಾರು 1 ಕೋಟಿ ಅನುದಾನದ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಇನ್ನೂ ಸ್ಥಳೀಯ ಶಾಸಕರ ಸ್ವಇಚ್ಚೆಯಂತೆ ನಗರೋತ್ಥನದಲ್ಲಿ 18ನೇ ವಾರ್ಡ ಹಾಗೂ ಕಂದಾಯ ಬಡಾವಣೆ ಅಭಿವೃದ್ದಿಗೆ ಕೂಡ ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಅತೀ ತುರ್ತಾಗಿ ಇರುವ ಸಮಸ್ಯೆಯನ್ನು ತಕ್ಷಣೆವೇ ನಿವಾರಿಸಲಾಗುವುದು.—ಎಂ.ಜೆ.ರಾಘವೇAದ್ರ, 18ನೇವಾರ್ಡ್ನ ಸದಸ್ಯ
2.ನಗರದ ಸರ್ವತೋಮುಖ ಅಭಿವೃದ್ದಿಗೆ ಈಗಾಗಲೇ ನಗರಸಬೆ ಸಾಮಾನ್ಯ ಸಭೆಯಲ್ಲಿ ಅನುಮೊಧನೆ ಪಡೆದು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ ಇನ್ನೂ ಕೆಲವು ತಿಂಗಳಲ್ಲಿ ಈ ಸಮಸ್ಯೆ ನಿವಾರಿಸಲಾಗುವುದು ಕುಡಿಯುವ ನೀರಿಗೆ ಹಾಗೂ ಅಂಗನವಾಡಿ ಕೇಂದ್ರಗಳ ಸ್ವಚ್ಚತೆಗೆ ಕ್ರಮವಹಿಸಲಾಗುವುದು.— ಸಿ.ಚಂದ್ರಪ್ಪ, ಪೌರಾಯುಕ್ತರು
3.ಸ್ವಾಮಿ ಇಲ್ಲಿ ನಮ್ಮ ಮಕ್ಕಳು ಓಡಾಡಲು ತುಂಬಾ ತೊಂದರೆಯಾಗುತ್ತದೆ, ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ, ಈಗೇ ಸುತ್ತಲು ಮಲೀನವಾದ ಕೊಳಚೆ ನೀರಿನ ಮಧ್ಯೆ ನಾವು ಜೀವಿಸುತ್ತಿದ್ದೆವೆ, ದಯಾಮಾಡಿ ನಮಗೆ ಜೀವನ ಮಾಡಲು ನಗರಸಭೆ ಅನುವು ಮಾಡಿಕೊಡಬೇಕು – ಓಬಳಮ್ಮ ವಾರ್ಡ್ನ ನಿವಾಸಿ
ಪೋಟೋ ಚಳ್ಳಕೆರೆ ನಗರದ 18ನೇ ವಾರ್ಡ್ಗೆ ಸಂಪರ್ಕಿರುವ ರಸ್ತೆ ಹಾಳಾಗಿ ನೀರು ನಿಂತಿರುವುದು.
ಪೋಟೋ ಚಳ್ಳಕೆರೆ ನಗರದ 18ನೇ ವಾರ್ಡ್ನ ನಾಲ್ಕು ಅಂಗನವಾಡಿಗಳು ಸ್ವಚ್ಚತೆ ಇಲ್ಲದೆ ದುಸ್ಥಿತಿಯಾಗಿರುವುದು