ಶ್ರೀ ಧರ್ಮಸ್ಥಳದ ಸಂಘದಿಂದ
ನೂರು ಹಾಸಿಗೆ ಆಸ್ಪತ್ರೆಗೆ ಪೀಠೋಪಕರಣ ವಿತರಣೆ : ಶಾಸಕ ಟಿ.ರಘುಮೂರ್ತಿಯಿಂದ ಶ್ಲಾಘನೀಯ

ಚಳ್ಳಕೆರೆ : ನಗರದ ನೂರು ಹಾಸಿಗೆ ಆಸ್ಪತ್ರೆಗೆ ಅವಶ್ಯವಾದ ಸಾರ್ವಜನಿಕರ ಹಾಸನದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘಧಿಂದ ನೀಡಿರುವುದು ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀ ‌ಧರ್ಮಸ್ಥಳ ಮಂಜುನಾಥ್ ಸಂಘದಿಂದ ಆಯೋಜಿಸಿದ್ದ ಸುಮಾರು ಎರಡುವರೆ ಲಕ್ಷ ವೆಚ್ಚದ ಪೀಠೋಪಕರಣ ಕಾರ್ಯಕ್ರಮವನ್ನು‌ಉದ್ಘಟಿಸಿ ಕುರ್ಚಿಗಳನ್ನು ಸಾರ್ವಜನಿಕರ ಸೇವೆಗೆ ಅರ್ಪಿಸಿ ಮಾತನಾಡಿದರು.

ಅಸಹಾಯಕರಿಗೆ, ನಿರುದ್ಯೋಗಿಗಳಿಗೆ ತನ್ನ ಸ್ವಂತ ಜೀವನ ಕಟ್ಟಿಕೊಳ್ಳಲು ವಿವಿಧ ಯೋಜನೆಗಳ ರೂಪದಲ್ಲಿ ಆರ್ಥಿಕ ಸಹಾಯ ನೆರವು‌ ನೀಡುವ ಮೂಲಕ ಸದಾ ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸ ತಂದಿದೆ, ಆದ್ದರಿಂದ ಇಂತಹ ಸೇವಾ ಮನೋಭಾವ ಪ್ರತಿಯೊಬ್ಬರೂ ಮೈ ಗೂಡಿಸಿಕೊಳ್ಳಬೇಕು ಎಂದರು

ಇನ್ನೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸಂಘದ ಪ್ರಾದೇಶಿಕ ನಿರ್ದೇಶಕರಾದ ಗೀತಾ ಮಾತನಾಡಿದರು,

ಇದೇ ಸಂಧರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ವೆಂಕಟೇಶ, ಆಯುರ್ವೇದ ಆಸ್ಪತ್ರೆಯ ಡಾ.ಉದಯ ಕುಮಾರ್, ನಗರಸಭೆ ಉಪಾಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನ ಕುಮಾರ್ , ಸದಸ್ಯ ರಮೇಶ್ ಗೌಡ, ಮಲ್ಲಿಕಾರ್ಜುನ , ಹಾಗೂ ವಿಶ್ವಕರ್ಮ ರಾಜ್ಯ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಕಮ್ಮತ್ ಮರಿಕುಂಟೆ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ, ಮತ್ತು ಮುಖಂಡರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!