ನಾಯಕನಹಟ್ಟಿ: ಎಸ್ಸಿ-ಎಸ್ಟಿ ಮೀಸಲಾತಿ ವಿಚಾರದಲ್ಲಿ ಸಚಿವ ಬಿ.ಶ್ರೀರಾಮುಲು ಮೀಸಲಾತಿ ಹೆಚ್ಚಳ ಮಾಡಿಸಿ ನುಡಿದಂತೆ ನಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಹೇಳಿದರು.
ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಎಸ್ಟಿ ಸಮಾವೇಶದ ಕುರಿತು ನಾಯಕನಹಟ್ಟಿ ಬಿಜೆಪಿ ಮಂಡಲದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಎಸ್ಸಿ-ಎಸ್ಟಿ ಮೀಸಲಾತಿಗಾಗಿ ಅನೇಕ ಹೋರಾಟಗಳು ನಡೆದರು ಈ ಹಿಂದೆ ಆಡಳಿತದಲ್ಲಿ ಪಕ್ಷಗಳು ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ. ಆದರೆ ಈಗ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದೆ. ಸಚಿವ ಶ್ರೀರಾಮುಲು ಎಸ್ಸಿ-ಎಸ್ ಟಿ ಮೀಸಲಾತಿ ಕೊಡಿದುತ್ತೇನೆ ಎಂದು ಮಾತು ಕೊಟ್ಟಿದ್ದರು., ಕೊಟ್ಟ ಮಾತಿನಂತೆ ಸಚಿವರು ಮೀಸಲಾತಿ ಹೆಚ್ಚಳ ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆನೀಡಿದರು.
ಬಳ್ಳಾರಿಯಲ್ಲಿ ಇದೇ ನವೆಂಬರ್ ೨೦ ರಂದು ನಡೆಯುವ ರಾಜ್ಯ ಮಟ್ಟದ ಎಸ್ಟಿ ಸಮಾವೇಶದಲ್ಲಿ ಕ್ಷೇತ್ರದ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಸಚಿವ ಬಿ.ಶ್ರೀರಾಮುಲು ಕೈ ಬಲಪಡಿಸಬೇಕು. ಕಾರ್ಯಕರ್ತರು ಸಮಾವೇಶದ ಕುರಿತು ಗ್ರಾಪಂ ಮಟ್ಟಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಹೇಳಿದರು.