ಎಸ್‌ಟಿ/ಎಸ್‌ಸಿ, ಸಮುದಾಯದ ಮೀಸಲಾತಿಗೆ ಸಮ್ಮಿತಿಸಿದ ಸರಕಾರವನ್ನು ಅಭಿನಂದಿಸಬೇಕಿದೆ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪೆರಿಯಾರ್ ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದಂತವರು ಈ ಹೋರಾಟದಿಂದ ಯಶಸ್ಸು ಕಂಡವರು ಇಂತಹ ಹೋರಾಟಗಾರರ ನಿಲುವನ್ನು ಮತ್ತು ಛಲವನ್ನು ಶೋಷಿತ ಸಮುದಾಯದ ಜನರು ರೂಡಿಸಿಕೊಳ್ಳಬೇಕು ಎಂದು ಚಲನಚಿತ್ರ ನಟ ಹಾಗೂ ವಿಚಾರವಾದಿ ಮೈನಾ ಚೇತನ್ ಹೇಳಿದರು.
ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಂಘದಿAದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರದಮಲ್ಲಿ ವಿವಿಧ ಗಣ್ಯರು ಭಾಗವಹಿಸಿ ಮೆರವಣೆಗೆ ಮೂಲಕ ಜಂಯತೋತ್ಸವವನ್ನು ಆಚರಣೆ ಮಾಡಿದರು.
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಕೂಡ ವೈಚಾರಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಎಚ್ಚರವಹಿಸಿ ಬದಲಾಗಬೇಕಿದೆ, ಈ ಮುಖಾಂತರ ಸಾಮಾಜಿಕ ಬದಲಾವಣೆಯನ್ನು ಕೂಡ ಮಾಡುವುದು ಅನಿವಾರ್ಯವಾಗಿದೆ ಎಂದರು.

ವಾಲ್ಮೀಕಿ ಮತ್ತು ಪೆರಿಯಾರ್ ಮುಂತಾದವರಿAದ ನಾವು ಸಾಮಾಜಿಕ ನ್ಯಾಯವನ್ನು ಪಡೆದರು, ನಮ್ಮಗಳಿಂದ ಸಮಾಜಕ್ಕೆ ಯಾವ ರೀತಿ ಕೊಡುಗೆ ಕೊಟ್ಟಿದ್ದೆವೆ ಎಂಬ ಅಂಶವನ್ನು ಕೂಡ ಮನಗಣಬೇಕಿದೆ ನಾವೆಲ್ಲರೂ ಕೂಡ ಈ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕಿದೆ ಪರಮಪೂಜ್ಯ ಶ್ರೀಗಳ ಮತ್ತು ರಾಜ್ಯ ಸರ್ಕಾರದ ಈ ಸಮುದಾಯವನ್ನು ಪ್ರತಿನಿಧಿಸುವ ಮಂತ್ರಿಗಳಿAದ ನಾಯಕ ಜನಾಂಗದ ಬಹುದಿನಗಳ ಬೇಡಿಕೆ ಮೀಸಲಾತಿಯನ್ನು ಹೆಚ್ಚಿಸುವ ಅಂತ ಕೆಲಸವಾಗಿದೆ ಜನ ಸರ್ಕಾರವನ್ನು ಈ ಸಮುದಾಯದ ಎಲ್ಲರೂ ಅಭಿನಂದಿಸಬೇಕಿದೆ ಎಂದರು.

ತಾಲೂಕ್ ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಬದಲಾವಣೆ ಎಂಬುದು ಅನಿವಾರ್ಯವಾಗಿದೆ ಹಿಂದಿನ ಕಾಲದ ಮಹಾನೀಯರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ, ವರ್ಗರಹಿತವಾದ ಸಮಾಜ ನಿರ್ಮಾಣವಾಗಬೇಕಿದೆ ರೈತರು ,ಕಾರ್ಮಿಕರು, ಮಹಿಳೆಯರು ತಮ್ಮ ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ನಾವು ಕಾಣುತಿದ್ದೆವೆ ಎಂದರು.

ಇದೇ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ದಿವಾಕರ್, ಬಿಜೆಪಿ ಮುಖಂಡರಾದ ಪ್ರಕಾಶ್‌ರೆಡ್ಡಿ, ತಿಮ್ಮಾರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಜೈಲಕ್ಷ್ಮಿ, ಉಪನ್ಯಾಸಕ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!