ಬಲಿಗಾಗಿ ಕಾಯುತ್ತಿವೆ ಅಪಾಯಕಾರಿ ರಸ್ತೆಗಳು
ರಸ್ತೆ ಸರಿಪಡಿಸುವಂತೆ ಸಚಿವ ಬಿ.ಶ್ರೀರಾಮುಲುಗೆ ಮನವಿ
ಮತದಾರರ ಋಣ ತೀರಿಸಲು
ಶಾಸಕರಿಗೆ ಕಿವಿ ಮಾತು ಹೇಳಿದ ಶ್ರೀಕಾಂತ

ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣ ಪಂಚಾಯತಿಯಾಗಿ 7ವರ್ಷವಾದರೂ ಅಭಿವೃದ್ದಿ ಮಾತ್ರ ಕುಂಠಿತವಾಗಿದೆ, ಪಟ್ಟಣದಲ್ಲಿ ಅದಗೆಟ್ಟ ರಸ್ತೆಗಳ, ಸ್ವಚ್ಚತೆ ಇಲ್ಲದೆ ಇರುವ ಚರಂಡಿಗಳು ಈಗೇ ಪಟ್ಟಣ ಪಂಚಾಯಿತಿಯಾಗಿ ಮೆರ್ಲ್ದಜೆಗೆ ಹೇರಿದರು ಕೂಡ ಅಭಿವೃದ್ದಿ ಕಾರ್ಯದಲ್ಲಿ ಮೌನ ವಹಿಸಿದ ಅಧಿಕಾರಿಗಳ ವಿರುಧ್ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಲೋಕ ಉಪಯೋಗ ಇಲಾಖೆ ರಸ್ತೆ ದುರಸ್ತಿಗಳ ಬಗ್ಗೆ ಗಮನಹರಿಸುತ್ತಿಲ್ಲ, ಮಳೆಬಂದು ರಸ್ತೆ ಮೇಲೆ ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶ್ರೀಕಾಂತ್ ಆರೋಪ ಮಾಡಿದ್ದಾರೆ.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿರುವ ರಸ್ತೆ ತಗ್ಗಿನಲ್ಲಿ ನಿಂತಿರುವ ನೀರನ್ನು ವೀಕ್ಷಿಸಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಪಟ್ಟಣದಿಂದ ತಳಕು ಮಾರ್ಗವಾಗಿ ಚಲಿಸುವ ವಾಹನ ಸವಾರರು ಸಾವಿನ ಭೀತಿಯಿಂದ ವಾಹನ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕ್ಷೇತ್ರದ ಶಾಸಕರು ಸಚಿವ ಬಿ.ರಾಮುಲು ಇತ್ತ ಕಡೆ ಗಮನಹಿರಿಸಬೇಕು , ಅಧಿಕಾರಿಗಳಿಗಳ ಚಳಿ ಬಿಡಿಸಬೇಕು, ಮತದಾರರ ಋಣ ತೀರಿಸಬೇಕು ಎಂದು ಮನವಿ ಮಾಡಿದರು.

About The Author

Namma Challakere Local News
error: Content is protected !!