ಸುಖ ಸುಮ್ಮನೆ ಕಛೇರಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿ
ಲೋಕಾಯುಕ್ತ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಸೂಚನೆ
ಚಳ್ಳಕೆರೆ : ಸುಖ ಸುಮ್ಮನೆ ಸರಕಾರಿ ಕಚೇರಿಗೆ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬಂದರೆ ಸೂಕ್ತ ಕ್ರಮವಹಿಸಲಾಗುವುದು ಎಂದು ಲೋಕಾಯುಕ್ತ ಇಲಾಖೆಯ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚಳ್ಳಕೆರೆ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿವಿಧ ಕೆಲಸ ಕಾರ್ಯಗಳತ್ತ ಗ್ರಾಮೀಣ ಪ್ರದೇಶದ ಜನರು ಕಚೇರಿಗೆ ಬಂದು ಅಧಿಕಾರಿಗಳು ಸ್ಪಂಧಿಸದೆ ಇರುವುದರಿಂದ ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡಿದರೆ ಮತ್ತೆ ಅದೇ ಅಧಿಕಾರಿಗಳಿಗೆ ದೂರವಾಣಿ ಮಾಡಿದರೆ ಸ್ಪಂಧನೆ ಇಲ್ಲ ಇಂತಹ ಅಧಿಕಾರಿಗಳ ನಿರ್ಲಕ್ಷö್ಯ ದೋರಣೆ ಸಲ್ಲದು ಎಂದು ಎಚ್ಚರಿಕೆ ನೀಡಿದರು.
ಕೇವಲ ಸರಕಾರಿ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂಬ ನೆಪ ಬಿಟ್ಟು ಇರುವ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸೇವೆ ಮಾಡಬೇಕು, ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಆದರೂ ಕೆಲವು ಇಲಾಖೆಯ ಅಧಿಕಾರಿಗಳು ಜನರನ್ನು ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಲೆದಾಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಕಂದಾಯ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳ ಕಡತಗಳನ್ನು ವಿಲೆ ಮಾಡುವ ಮೂಲಕ ಜನ ಸಾಮನ್ಯರ ಒಡನಾಡಿಯಾಗಿ ಸೇವೆ ಸಲ್ಲಿಸುತ್ತಿದೆ, ಇಲಾಖೆಯ ಅಧಿಕಾರಿಗಳು ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಹೇಳುವುದನ್ನು ಬಿಟ್ಟು ಕಚೇರಿಯಲ್ಲಿ ಕೆಲಸ ವಿಳಂಭದ ಬಗ್ಗೆ ಸಂಕೋಚ ಬಿಟ್ಟು ದೈರ್ಯದಿಂದ ಮಾಹಿತಿ ನೀಡಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಲೋಕಾಯುಕ್ತ ಪಿಐ ಲತಾ. ಪೌರಾಯುಕ್ತ ಚಂದ್ರಪ್ಪ, ನರೇಗಾ ಸಹಾಯಕ ನಿರ್ಧೇಕ ಸಂತೋಷ್‌ಕುಮಾರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರುಪಾಕ್ಷಪ್ಪ, ಕೃಷಿ ಸಹಾಯಕ ನಿರ್ದೇಶಕ ಡಾ.ಅಶೋಕ್, ಪಶುಸಂಗೋಪನೆ ಇಲಾಖೆ ಸಹಾಯಕ ನಿದೇಶಕ ಡಾ.ರೇವಣ್ಣ, ಕಾರ್ಮಿಕ ನಿರೀಕ್ಷಕ ಕುಸುಮ, ಎಇಇ ಕಾವ್ಯ, ಅರಣ್ಯಾಧಿಕಾರಿಗಳಾದ ಬಾಬು, ವಸಂತ್, ನಾಯಕನಹಟ್ಟಿಪಟ್ಟಣ ಪಂಚಾಯತ್ ಪೌರಾಯುಕ್ತ ಲೀಲಾವತಿ, ತಾಲೂಕು ಭೂಮಾಕ ಸಹಾಯಕ ನಿರ್ದೇಶ ಗಂಗಯ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಹಾಜರಿದ್ದರು.
ಪೋಟೋ ಚಳ್ಳಕೆರೆ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗೆ ಆಯೋಜಿಸಿದ್ದ ಸಭೆಯಲ್ಲಿ ಲೋಕಾಯುಕ್ತ ಇಲಾಖೆಯ ಜಿಲ್ಲಾ ಎಸ್ಪಿ ವಾಸುದೇವ್ ರಾವ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.