ಮಂಡ್ಯ : ಹತ್ಯಚಾರ ಎಸಗಿ ಕೊಲೆಮಾಡಿದ ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯಿಸಿ : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಮಂಡ್ಯ : ರಾಜ್ಯದಲ್ಲಿ ಸರಕಾರದ ವೈಪಲ್ಯವೋ, ಅಥಾವಾ ಪೊಲೀಸ್ ಇಲಾಖೆಯ ನಿರ್ಲ್ಯಕ್ಷವೋ ಗೊತ್ತಿಲ್ಲ… ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಹತ್ಯಚಾರಗಳು ನಡೆಯುತ್ತಿವೆ ಇದಕ್ಕೆ ಸಾಕ್ಷಿ ಎಂಬAತೆ ಮಂಡ್ಯ ಜಿಲ್ಲೆಯ ಮಳವಳ್ಳಿ ನಗರದಲ್ಲಿ ದಿವ್ಯ ಎಂಬಾ ಬಾಲಕಿಯ ಮೇಲೆ ಹತ್ಯಚಾರ ಎಸಗಿ ಕೊಲೆ ಮಾಡಿರುವುದು ವಿಷಾಧನೀಯ ಸಂಗತಿ
ಇAತಹ ಘಟನೆಗಳು ಮತ್ತೆ ಮತ್ತೆ ರಾಜ್ಯದಲ್ಲಿ ಮರುಕಳಿಸದಂತೆ ಸರಕಾರಗಳು ಕಠಿಣವಾದ ನಿಲುವು ತಾಳಬೇಕು, ಇನ್ನೂ ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸಬೇಕು, ಹತ್ಯಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಪ್ರಕಾಶ್ ಬಿರಾವರ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಹತ್ಯಚಾರಕ್ಕೆ ಬಲಿಯಾದ ಬಾಲಕಿ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ ಅವರು ಆರೋಪಿಗೆ ಗಲ್ಲು ಶಿಕ್ಷೆಯಾಗುವವರೆಗೂ ಹೋರಾಟ ಮಾಡುತ್ತೆವೆ ದಿವ್ಯಾಳ ಆತ್ಮಕ್ಕೆ ಶಾಂತಿ ಕೋರೊಣ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತೆವೆ ಎಂದರು.
ಇದೇ ಸಂಧರ್ಭದಲ್ಲಿ ಹಿರಿಯೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಟಿ.ಬಸವರಾಜ್ ರವರು ವೈಯಕ್ತಿವಾಗಿ ಸಂಕಷ್ಟದ ಕುಟುಂಬಕ್ಕೆ ಧನ ಸಹಾಯ ಮಾಡಿದರು
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಕೆ.ತಿಮ್ಮರಾಜು, ರಾಜ್ಯಉಪಾಧ್ಯಕ್ಷ ಚಂದ್ರಣ್ಣಘಾಟ್, ರಾಜ್ಯಪ್ರಧಾನ ಕಾರ್ಯದರ್ಶಿ ವೆಂಕಟೇಶ ಸೂರಗೊಂಡನಹಳ್ಳಿ, ರೆಡ್ಡಿ ಹರಿಶ್ಚಂದ್ರಘಾಟ್, ಮಂಜುನಾಥ ಇವರು ಸ್ಥಳದಲ್ಲಿ ಇದ್ದರು