ಚಳ್ಳಕೆರೆಯಲ್ಲಿ ಅ.15 ಪವರ್ ಕಟ್ ಸಹಕರಿಸಲು : ಬೆವಿಕಂ.ಅಧಿಕಾರಿ ರಾಜಣ್ಣ ಮನವಿ
ಚಳ್ಳಕೆರೆ : ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ
66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ
ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ
ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಲ್ಲಿ ಅ.15 ರಂದು ವಿದ್ಯುತ್ ವ್ಯತ್ಯಾಸ ವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಸ್.ರಾಜು ಹೇಳಿದ್ದಾರೆ.
ಅವರು ಬೆಸ್ಕಾಂ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪಾವಗಡ ರಸ್ತೆ, ಬೆಂಗಳೂರು ರಸ್ತೆ, ದುರ್ಗಾವರ, ರೆಡ್ಡಿಹಳ್ಳಿ, ಸಿದ್ದಾಪುರ, ನನ್ನಿವಾಳ, ಸೂಮಗುದ್ದು ರಸ್ತೆ, ಬಳ್ಳಾರಿ ರಸ್ತೆ ಗಾಂಧಿನಗರ , ವೀರದಿಮ್ಮನಹಳ್ಳಿ
ಎನ್.ಜೆ.ವೈ. ಎಫ್-12, ಕುಡಿಯುವ ನೀರು 11ಕೆವಿ.ಮಾರ್ಗಗಳಲ್ಲಿ ಬೆಳಿಗ್ಗೆ 10:00
ಗಂಟೆಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು
ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.