ಗೌರಿಪುರಗ್ರಾಮದಲ್ಲಿ 18 ಗುಡಿಸಲುಗಳು ಮಳೆಗೆ ಮುಳುಗಡೆ : ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ವಾಸ್ತವ್ಯ
ಚಳ್ಳಕೆರೆ : ರಾತ್ರಿ ಸುರಿದ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಸಿದ್ದೇಶನ ದುರ್ಗದ ಗೌರಿಪುರದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಘಟನೆ ನಡೆದಿದೆ.
ಗೌರಿಪುರ ಗ್ರಾಮದ ಸುಮಾರು 18 ಗುಡಿಸಲುಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿಯಾಗಿದೆ.
ಇನ್ನೂ ಸಂತ್ರಸ್ತರಿಗೆ ಆಶ್ರಯ ನೀಡಲು ತಾಲೂಕು ಪಂಚಾಯತ್ ಅಧಿಕಾರಿಗಳು ಗಂಜಿ ಕೇಂದ್ರ ತೆರೆಯುವ ಮೂಲಕ ಸಂತ್ರಸ್ತರಿಗೆ ಆಶ್ರಯ ನೀಡಿದ್ದಾರೆ.
ಸುಮಾರು18 ಕುಟುಂಬಗಳ ಸಂತ್ರಸ್ತರಿಗೆ ಗ್ರಾಮದ ಹೊರವಲಯದಲ್ಲಿ ತಾಪಂ.ಹಾಗೂ ಗ್ರಾಮ ಪಂಚಾಯತ್ ನೆರವು ನೀಡುವುದರ ಮೂಲಕ ಆಶ್ರಯ ನೀಡಿದ್ದಾರೆ.
ಸ್ಥಳಕ್ಕೆ ಕುದ್ದಾಗಿ ತಾಪಂ.ಸಹಯಾಕ ನಿರ್ದೇಶಕ ಸಂತೋಷ, ಹಾಗೂ ಸಂಪತ್ ಕುಮಾರ್ ಪಿಡಿಓ ಹನುಮಂತರಾಜು, ಗ್ರಾಮಪಂಚಾಯತಿ ಅಧ್ಯಕ್ಷ ಮೌರ್ಯ, ಗ್ರಾಮಲೆಕ್ಕಾಧಿಕಾರಿ ದೇವರಾಜ್ , ಇನ್ನೂ ಸದಸ್ಯರು ಬೇಟಿ ನೀಡಿ ಸಂತ್ರಸ್ತರ ಆಶ್ರಯಕ್ಕೆ ನಿಂತಿದ್ದಾರೆ.