ಸಾಂಸ್ಕೃತಿಕವಾಗಿ ಹಿರಿಮೆ ಹೊಂದಿದ ವಿಶ್ವೇಶ್ವರಪುರ ಗ್ರಾಮ : ತಹಶಿಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಮತ್ತು ವೈಚಾರಿಕವಾಗಿ ವಿಶ್ವೇಶ್ವರಪುರ ಗ್ರಾಮ ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಎಂದು ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ

ಅವರು ತಾಲೂಕಿನ ವಿಶ್ವೇಶ್ವರಪುರ ಗ್ರಾಮದಲ್ಲಿ ಆಮ್ಮಿಕೊಂಡ ಗೌರಿ ಪೂಜೆಯನ್ನು ಹಮ್ಮಿಕೊಂಡ ಗಂಗೆಗೆ ಗೌರಿಯನ್ನು ಸಮರ್ಪಿಸುವಂತ ಕಾರ್ಯಕ್ರಮಕ್ಕೆ ಭೇಟಿ ನೀಡಿ ಪೂಜಾ ಕೈoಕಾರ್ಯಗಳಲ್ಲಿ ಭಾಗಿಯಾಗಿ, ನಮ್ಮ ದೇಶದ ಪರಂಪರೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಗಳಿಗೆ ವಿಶೇಷವಾದ ಸ್ಥಾನಮಾನವಿದೆ.

ಇದರಿಂದಲೇ ವಿಶ್ವಶಾಂತಿಗೆ ಪ್ರೇರೇಪಿಸಲು ಸಾಧ್ಯವಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿರುವಂತಹ ಯುವಕರು ಹೆಚ್ಚು ಹೆಚ್ಚು ಜ್ಞಾನಾರ್ಜನೆಯನ್ನು ಪಡೆಯಬೇಕು ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರು, ಮಹಾತ್ಮ ಗಾಂಧೀಜಿ ಮತ್ತು ಡಾ.ಬಿಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜ ಸೇವೆಯಲ್ಲಿ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ದೀಕ್ಷೆ ಪಡೆಯಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ನಂದಿಧ್ವಜವನ್ನು ಹೊತ್ತು ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥ್, ಚಂದ್ರಣ್ಣ, ಆಂಜನಪ್ಪ, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು

Namma Challakere Local News
error: Content is protected !!