ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷ ಅನಾರೋಗ್ಯದಿಂದ ಸಾವು
ಚಳ್ಳಕೆರೆ : ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಾದಳದ ತಾಲೂಕು ಅಧ್ಯಕ್ಷ ರಾಮಾಂಜನೇಯ ಇಂದು ನಮ್ಮನಗಲಿರುವುದು ವಿಷಧಾನೀಯ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ.ವಿಜಯಯ್ ಕುಮಾರ್ ಕಂಬನಿ ಮಿಡಿದಿದ್ದಾರೆ.
ತಾಲೂಕಿನ ಗಾಂಧಿ ನಗರದಲ್ಲಿ ವಾಸವಾಗಿದ್ದ ರಾಮಾಂಜನೇಯ ಕಳೆದ ಹಲವು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕನಾಗಿ ಪಕ್ಷ ಸಂಘಟನೆಗೆ ದುಡಿದಿದ್ದರು.
ಇನ್ನೂ ಚಳ್ಳಕೆರೆ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳ ಒಡನಾಟ ಹೊಂದಿದ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು.
ಮಾಜಿ ಸಚಿವ ಡಿ.ಸುಧಾಕರ್ ಬಳಿ ಸಮಾರು ವರ್ಷಗಳ ಕಾಲ ಪಕ್ಷ ಸಂಘಟನೆಗೆ ದುಡಿದಿದ್ದರು ಆದೇ ರೀತಿಯಲ್ಲಿ ಜಯಣ್ಣ, ಪ್ರಭುಣ್ಣ, ಹಾಗೂ ಜಗಲೂರಯ್ಯ, ಮಾಜಿ ಸಚಿವ ಹೆಚ್. ಆಂಜನೇಯ ಬಳಿ ಉತ್ತಮ ಸ್ನೇಹದಿಂದ ಪಕ್ಷ ಸಂಘಟನೆ ಶ್ರಮಿಸಿದರು ಈಗ ಪ್ರಸ್ತುತ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರ ಒಡನಾಟದೊಂದಿಗೆ ಕಾಂಗ್ರೆಸ್ ಪಕ್ಷದ ಸೇವಾದಳದ ತಾಲೂಕು ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದರು.
ಆದರೆ ಆರೋಗ್ಯ ಸಮಸ್ಯೆಯಿಂದ ಕಳೆದ ಹಲವು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ದೈವದೀನಾಗಿದ್ದಾರೆ ಎನ್ನಲಾಗಿದೆ.
ಇನ್ನೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ
ಇನ್ನೂ ಮೃತರ ಆತ್ಮಕ್ಕೆ ಶಾಂತಿಕೋರಲು ಮೃತರ ಮನೆಗೆ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್.ಆಂಜನೇಯ ,ಡಿ.ಸುಧಾಕರ್ ಆಗಮಿಸುವ ಸಾಧ್ಯತೆಗಳು ಹೆಚ್ಚಿವೆ, ಸಂಜೆವೇಳೆಗೆ ಅಂತ್ಯ ಸಂಸ್ಕಾರ ನೆರೆವೆರಿಸುವುದಾಗಿ ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ