ಭಾರತ್ ಜೋಡೋ : ಪೌರಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಹೆಜ್ಜೆ, ಶಾಸಕ ಟಿ.ರಘುಮೂರ್ತಿ ಸಾಥ್
ಚಳ್ಳಕೆರೆ : ಕಾಗ್ರೇಸ್ ಯುವ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆಗೆ ಕೋಟೆ ನಾಡಿನ ಚಳ್ಳಕೆರೆಯಲ್ಲಿ ಅಭೂತ ಪೂರ್ವ ಸ್ವಾಗತದ ಮೂಲಕ ಭರಮಾಡಿಕೊಂಡು ನಂತರ ನಗರದ ಹೊರ ವಲಯದ ಎಸ್‌ಆರ್‌ಎಸ್ ಶಾಲೆಯ ಹತ್ತಿರ ವಾಸ್ತವ್ಯ ಹೂಡಿ ನಂತರ ಮರು ದಿನ ಅ.12 ರ ಬೆಳಿಗ್ಗೆ 6.30ಕ್ಕೆ ಸರಿಯಾಗಿ ಹೊರಟ ಪಾದಯಾತ್ರೆ ನೆಹರು ವತ್ತ ಬಳಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ,. ಮಾಜಿ ಸಚಿವ ಡಿ.ಸುಧಾಕರ್ ಹೆಜ್ಜೆ ಹಾಕುವ ಮೂಲಕ ಸಾಥ್ ನೀಡಿದರು.
ಇನ್ನೂ ದಾರಿಯುದ್ದಕ್ಕೂ ರಾಹುಲ್ ನೋಡಲು ಜನರು ಕಿಕ್ಕಿರಿದು ಸೇರಿದ್ದರು, ಇನ್ನೂ ಮುಂಜಾನೆಯೇ ರಾಹುಲ್ ಗೆ ಈಡೀ ನಗರದಲ್ಲಿ ಮುವತ್ತು ಅಡಿಗೂ ಅಧಿಕ ದೊಡ್ಡ ದೊಡ್ಡ ಕಟೌಟ್ ಕಟ್ಟುವುದರ ಮೂಲಕ, ನೆಹರು ವೃತ್ತಕ್ಕೆ ವಿಶೇಷ ಹೂವಿನ ಅಂಲಕಾರ ಮಾಡಿ ಸ್ವಾಗತ ಕೋರಿದರು.
ಪೌರಕಾರ್ಮಿಕರೊಂದಿಗೆ ರಾಹುಲ್ ಹೆಜ್ಜೆ
ಇನ್ನೂ ನಗರಸಭೆ ಪೌರಕಾರ್ಮಿಕರಾದ ಗೌರಮ್ಮನನ್ನು ಕೈ ಬಿಸಿ ತನ್ನತ್ತ ಕರೆದು ಅವರ ಬಳಿ ಕೆಲ ಕಾಲ ಮಾತನಾಡಿತ್ತ ಹೆಜ್ಜೆ ಹಾಕಿದರು. ಈಗೇ ದಾರಿಯುದ್ದಕ್ಕೂ ಲಂಬಾಣಿ ಉಡುಗೆ ತೊಟ್ಟ ಹೈದಿಯರು ರಾಹುಲ್ ಪಾದಯಾತ್ರೆಗೆ ಸಾಥ್ ನೀಡಿದರು.
ಪಾದಯಾತ್ರೆಯಲ್ಲಿ ಕಪ್ಪು ಬಟ್ಟೆ ಪ್ರದರ್ಶನ
ಒಳ ಮಿಸಲಾತಿ ವಿರೋಧಿ ಸಿದ್ದರಾಮಯ್ಯ ಎಂದು ಚಳ್ಳಕೆರೆ ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ದಂಡೋರ ಹಾಗೂ ಇನ್ನೂ ಕೆಲವು ದಲಿತ ಮುಖಂಡರು ಕಪ್ಪು ಬಟ್ಟೆ ಕಟ್ಟಿಕೊಂಡು ದಿಕ್ಕಾರ ಕೂಗಿದರು. ಇನ್ನೂ ಇದಕ್ಕೆ ಕ್ಯಾರೆ ಮಾಡದ ಸಿದ್ದರಾಮಯ್ಯ ಮುಂದೆ ಮುಂದೆ ಸಾಗಿದರು.
ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆಗೆ ಜನಸಾಗರದ ಮೂಲಕ ಚಳ್ಳಕೆರೆ ಕ್ಷೇತ್ರದಿಂದ ಮೊಳಕಾಲ್ಮುರು ಕ್ಷೇತ್ರಕ್ಕೆ ಬಿಳ್ಕೋಟ್ಟರು.
ಭಾರತ್ ಜೋಡೋ ಯಾತ್ರೆ ಹಿರೆಹಳ್ಳಿ ಸಮೀಪದಲ್ಲಿ ಇಂದು ವಾಸ್ತವ್ಯ ವುಡಲಿದೆ ಎನ್ನಲಾಗಿದೆ.
ಪಾದಯಾತ್ರೆಯಲ್ಲಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಎಐಸಿಸಿ ವೇಣುಗೋಪಾಲ್, ಪ್ರದಾನ ಕಾರ್ಯದರ್ಶಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ.ಹರಿಪ್ರಸಾದ್, ಡಿ.ಕೆ.ಸುರೇಶ್, ಪ್ರಿಯಾಂಕ ಖರ್ಗೆ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್. ಆಂಜನೇಯ, ಸುಧಾಕರ್, ಲಕ್ಷ್ಮೀ ಹೆಬ್ಬಾಳಕರ್, ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು.