ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಪುತ್ಥಳಿಗೆ ಅಗೌರವ : ಪ್ರತಿಭಟನೆ ನಂತರ ಎಚ್ಚೆತ್ತುಕೊಂಡ ನಗರಸಭೆ

ಚಳ್ಳಕೆರೆ : ವಾಲ್ಮೀಕಿ ಜಯಂತಿ ಅಂಗವಾಗಿ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತಿದಲ್ಲಿ ಇರುವ ವಾಲ್ಮೀಕಿ ಪುತ್ಥಳಿ ಸ್ವಚ್ಚಗೊಳಿಸದೆ ಹೂವು ಮಾಲೆ ಅರ್ಪಿಸಿ ಗೌರವ ಸಲ್ಲಿಸಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮುದಾಯದ ಮುಖಂಡರು ನಗರಸಭೆ ಮುಂದೆ ಪ್ರತಿಭಟನೆ
ನಡೆಸಿದರು.

ಇನ್ನೂ ಈ ಅಗೌರವ ತೋರಿದ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ರಕ್ಷಣಾ ವೇದಿಕೆ ಅಧ್ಯಕ್ಷ ಟಿಜೆ.ವೆಂಕಟೇಶ, ಮಾಜಿ ನಗರಸಭೆ ಸದಸ್ಯ ಗೋವಿಂದರಾಜು, ವೀರಭದ್ರ ನಾಯಕ, ಚೇತನ್ ಕುಮಾರ್, ಪ್ರಶಾಂತ್ ನಾಯಕ, ಬೈಯಣ್ಣ, ಇತರ ಪ್ರಮುಖ ಮುಖಂಡರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಇನ್ನೂ ಪ್ರತಿ ವರ್ಷದಂತೆ ಮಹನೀಯರ ಜಯಂತಿಗಳ ಸಂಧರ್ಭದಲ್ಲಿ ಪ್ರತಿ ಮಹನೀಯರ ಪುತ್ಥಳಿಗೆ ಸ್ವಚ್ಛ ಗೊಳಿಸಿ ಹೂವು ಮಾಲೆ ಅರ್ಪಿಸಿ ಗೌರವ ಸಲ್ಲಿಸುವುದು ವಾಡಿಕೆಯಾಗಿತ್ತು.

ಆದರೆ ಬಾರಿ ‌ನಗರಸಭೆ ಆದ್ಯಾವ ಕಾರಣಕ್ಕೋ ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಪುತ್ಥಳಿಗೆ ಸ್ವಚ್ಛಗೊಳಿಸದೆ ಇರುವುದು ಸಾರ್ವಜನಿಕರ ಕೆಂಗಣಿಗೆ ಗುರಿಯಾಗಿದ್ದಾರೆ

ಮಹರ್ಷಿ ವಾಲ್ಮೀಕಿ ಗೆ ಗೌರವ ಸಲ್ಲಿಸ ಬೇಕಾದ ನಗರಸಭೆ ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿರುವುದನ್ನು‌ ಖಂಡಿಸಿ ಇಂದು ವಾಲ್ಮೀಕಿ ಸಮುದಾಯದ ಮುಖಂಡರು ನಗರಸಭೆ ಮುಂದೆ ಪ್ರತಿಭಟನೆ ಮಾಡುವ ಮೂಲಕ ದಿಕ್ಕಾರ ಕೂಗಿದರು.

ಇನ್ನೂ ಜನರು ಆಕ್ರೋಶ ವ್ಯಕ್ತಪಡಿಸಿದ ಸ್ಥಳಕ್ಕೆ ತಹಶಿಲ್ದಾರ್ ಎನ್ .ರಘುಮೂರ್ತಿ ಮಧ್ಯಸ್ಥಿಕೆ ವಹಿಸಿ ಮಹರ್ಷಿ ವಾಲ್ಮೀಕಿಯನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಈದೇ ಸಂಧರ್ಭದಲ್ಲಿ ರಾಜ್ಯಸರ್ಕಾರ ನಿರ್ಣಯಕ ತೀರ್ಪು ಕೈಗೊಂಡು ಮೀಸಲಾತಿ ಹೆಚ್ಚಳ‌ ಮಾಡಿರುವುದು ನಮಗೆಲ್ಲ ಸೌಭಾಗ್ಯದ ದಿನ.

ಈ ಸುದೀನ ನಾವು ನೀವೆಲ್ಲ ಸಂತೋಷ ಪಡುವ ದಿನವಾಗಬೇಕು ಎಂದು ಜನರನ್ನು‌ ಮನವೊಲಿಸಿ ವಾಲ್ಮೀಕಿ ಪುತ್ಥಳಿಯನ್ನು ಸ್ಥಳದಲ್ಲಿ ಸ್ವಚ್ಚಗೊಳಿಸಿ ಹೂವು ಮಾಲೆ ಅರ್ಪಿಸಿದರು.

ಇನ್ನೂ ಸ್ಥಳದಲ್ಲಿ‌ ನೆರೆದಿದ್ದ ಸಮುದಾಯದ ಮುಖಂಡರು ವಾಲ್ಮೀಕಿ ಪುತ್ಥಳಿಗೆ ಹೂವುಮಾಲೆ ಹಾಕಿ‌ಗೌರವ ಸಮರ್ಪಿಸಿದರು.

ಅತೀ ತುರ್ತಾಗಿ ಕಾರ್ಯಪ್ರವೃತ್ತರಾದ ತಹಶಿಲ್ದಾರ್ ಎನ್.ರಘುಮೂರ್ತಿ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಹಾಗೂ ಅಧಿಕಾರಿಗಳು ವಾಲ್ಮಿಕಿಗೆ ಗೌರವ ಸಲ್ಲಿಸಿದರು.

Namma Challakere Local News
error: Content is protected !!