ಮದ್ಯ ಮುಕ್ತ ಕರ್ನಾಟಕಕ್ಕೆ ಕಂಕಣ ಬದ್ಧರಾಗಿ : ತಹಶಿಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಹಾಗೂ ನೈರ್ಮಲೀಕರಣದ ಅಂಶಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಒಳಮಟ್ಟದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಆಯೋಜಿಸಿದ್ದ ಗಾಂಧಿ ಸ್ಮೃತಿ ಮತ್ತು ಮದ್ಯ ಮುಕ್ತ ಕರ್ನಾಟಕ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಸಮಾಜದಲ್ಲಿ ಅದೆಷ್ಟೋ ಶ್ರೀಮಂತರು ತಮ್ಮ ದುಡಿಮೆಯಲ್ಲಿ ಶೇಕಡ 2ರಿಂದ 3ರಷ್ಟು ಸಮಾಜಕ್ಕೆ ದಾನ ಮಾಡುವವರು ಇದ್ದಾರೆ, ಇವರುಗಳನ್ನು ಪ್ರೇರೇಪಣೆಗೊಳಿಸುವ ಕೆಲಸವನ್ನು ಸಮಾಜದಲ್ಲಿರುವ ನಾವೆಲ್ಲರೂ ಕೂಡ ಮಾಡಬೇಕು ನವ ಭಾರತ ನಿರ್ಮಾಣಕ್ಕಾಗಿ ಶೋಷಿತರ, ದಿನ ದಲಿತರ ಮತ್ತು ಅಸಹಾಯಕರ ಪರವಾಗಿ ನಾವು ಕೆಲಸ ಮಾಡಿದಾಗ ಮಾತ್ರ ನಿಜವಾದ ಸಮಾಜದ ಬದಲಾವಣೆ ಸಾಧ್ಯ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಇದೇ ವೇಳೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಗೀತಾ ಮಾತನಾಡಿ ಈ ಸಂಸ್ಥೆಯು ನಿರಂತರ ಇಪ್ಪತೈದು ವರ್ಷದಿಂದ ಮಧ್ಯ ಮುಕ್ತ ಕರ್ನಾಟಕಕ್ಕೆ ಕೈಜೋಡಿಸಲಾಗಿದೆ. ಸಂಸ್ಥೆಯವತಿಯಿAದ ಪರಿಣಾಮಕಾರಿ ಆದಂತ ಅಭಿವೃದ್ಧಿ ಕೆಲಸಗಳು ಮತ್ತು ಸಾಮಾಜಿಕ ಕೆಲಸಗಳನ್ನು ನಿರ್ವಹಿಸಲಾಗಿದೆ ಉದಾತ್ತ ಚಿಂತನೆಗಳೊAದಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ಕುಟುಂಬದಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಕೂಡ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗುವಂತೆ ಪೋಷಕರು ಅಣಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ಟ್ರಸ್ಟ್ನ ಅಧ್ಯಕ್ಷ ಷಡಕ್ಷರಪ್ಪ, ಪ್ರಾದೇಶಿಕ ನಿರ್ದೇಶಕ ಜನಾರ್ಧನ್, ಆರಕ್ಷಕ ಉಪನಿರೀಕ್ಷಕ ಜೆ ಶಿವರಾಜ್, ಪಟ್ಟಣ ಪಂಚಾಯಿತಿಯ ಸದಸ್ಯ ಸೈಯದ್ ಅನ್ವರ್, ಬಿಜೆಪಿ ಮುಖಂಡ ಎಂವೈಟಿ ಸ್ವಾಮಿ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಗಂಗಾಧರಪ್ಪ, ಸಂಪನ್ಮೂಲ ವ್ಯಕ್ತಿ ವಿ.ಧನಂಜಯ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ ವಿಕಾಸ್, ದಂತ ವೈದ್ಯರಾದ ಡಾ.ಓಬಣ್ಣ, ಯೋಜನೆ ಅಧಿಕಾರಿ ಪಿಎಸ್.ಅಣ್ಣಪ್ಪ, ಶಶಿಕಲಾ, ಸುವರ್ಣ, ಗಣೇಶ್ ಹಾಗೂ ನಾಯಕನಹಟ್ಟಿ ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು
ಪೋಟೋ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಒಳಮಟ್ಟದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಆಯೋಜಿಸಿದ್ದ ಗಾಂಧಿ ಸ್ಮೃತಿ ಮತ್ತು ಮಧ್ಯ ಮುಕ್ತ ಕರ್ನಾಟಕ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಚಾಲನೆ ನೀಡಿದರು.