ರತ್ನಗಿರಿಹಟ್ಟಿಯಲ್ಲಿ ವ್ಯಕ್ತಿಯೊಬ್ಬ ನೆಣಿಗೆ ಶರಣು
ಚಳ್ಳಕೆರೆ : ವ್ಯಕ್ತಿಯೊಬ್ಬ ನೆಣಿಗೆ ಶರಣಾದ ಘಟನೆ ನನ್ನಿವಾಳದಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ನನ್ನಿವಾಳ ಮಜಿರೆ ಗ್ರಾಮದ ರತ್ನಗಿರಿ ಹಟ್ಟಿಯ ತಿಪ್ಪೆಸ್ವಾಮಿ 55ವರ್ಷ ಎಂಬ ವ್ಯಕ್ತಿ ನೆಣಿಗೆ ಶರಣಾಗಿದ್ದಾನೆ.
ಮನೆಯಿಂದ ತೆರಳಿದ ವ್ಯಕ್ತಿ ನಿರ್ಜನ ಪ್ರದೇಶದ ಒಲವೊಂದರ ಬ್ಯಾಲದ ಮರಕ್ಕೆ ತನ್ನ ಲುಂಗಿ ಹಾಗೂ ಟವಾಲ್ ಮೂಲಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.
ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಇನ್ಸೆಪೆಕ್ಟೆರ್ ಉಮೇಶ್, ಪಿಎಸ್‌ಐ ತಿಮ್ಮಣ್ಣ, ಸ್ಥಳಕ್ಕೆ ಬೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.