ತಾಯಿತನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಮುಖ್ಯ : ಸಿಡಿಪಿಓ ಕೃಷ್ಣಪ್ಪ
ಚಳ್ಳಕೆರೆ : ಗರ್ಭಿಣಿಯರು ಬಾಣಂತಿಯರಲ್ಲಿ ಪೌಷ್ಟಿಕಾಂಶ ಮಟ್ಟದ ವೃದ್ಧಿಗಾಗಿ ಮಾತೃಪೂರ್ಣ ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಪೊಷಕಾಂಶ ಹೊಂದಿರುವ ಸೊಪ್ಪು ತರಕಾರಿ ಜೊತೆ ಮೊಳಕೆ ಕಾಳುಗಳನ್ನು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಿಡಿಪಿಓ ಕೃಷ್ಣಪ್ಪ ಹೇಳಿದರು.
ಅವರು ತಾಲೂಕಿನ ಗೊರ್ಲತ್ತು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕೇಂದ್ರದಿAದ ಆಮ್ಮಿಕೊಂಡ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ತಾಯಿ ಆರೋಗ್ಯ ವಂತರಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವಾಗುತ್ತದೆ, ಅಪೌಷ್ಟಿಕ ಮುಕ್ತ ತಾಲೂಕು ರೂಪಿಸಲು ಇದರ ಉದ್ದೇಶವಾಗಿದೆ.
ಆದ್ದರಿಂದ ಸರ್ಕಾರದ ಯೋಜನೆ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಪೋಷನ್ ಅಭಿಯಾನ ಕಾರ್ಯಕ್ರಮದ ಸದುಪಯೋಗ ತಿಳಿಸಬೇಕು ಎಂದರು.
ಅಂಗನವಾಡಿ ಮೇಲ್ವಿಚಾರಕಿ ತಿಪ್ಪಮ್ಮ ಮಾತನಾಡಿ ಗರ್ಭಿಣಿಯರು ಬಾಣಂತಿಯರು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಆಗುವ ರಕ್ತ ಹೀನತೆಯಿಂದ ಬಳಲದಂತೆ ಸದಾ ನಿಗವಹಿಸಬೇಕು ಇದರಿಂದ ಎರಡು ಜೀವಗಳು ಅನಾರೋಗ್ಯಕ್ಕೆ ತುತ್ತಾಗುವ ಅಪಾಯಗಳು ಇವೆ, ಇದಕ್ಕಾಗಿಯೇ ಗರ್ಭಣಿ ಸ್ತ್ರೀಯರು ತಪ್ಪದೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಇಲ್ಲಿ ಕಾರ್ಯಕರ್ತರು ನೀಡುವಂತಹ ಸಲಹೆ ಸೂಚನೆಗಳನ್ನು ಪಡೆದು ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಿಜಲಿಂಗಪ್ಪ, ವಸಂತಚೌಹಾಣ್, ಕುಮಾರಸ್ವಾಮಿ, ಸತೀಶ್, ಗೋವಿಂದಪ್ಪ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅಂಗನವಾಡಿ ಕಾರ್ಯಕರ್ತರು ಇದ್ದರು.
ಪೋಟೋ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪೋಷನ್ ಅಭಿಯಾನ ಕಾರ್ಯಕ್ರಮಕ್ಕೆ ಸಿಡಿಪಿಓ ಕೃಷ್ಣಪ್ಪ ಚಾಲನೆ ನೀಡಿದರು.