ಸ್ಮಶಾಸನ ಭೂಮಿ ಒತ್ತುವರಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಮರುವಶಕ್ಕೆ

ಚಳ್ಳಕೆರೆ : ಗ್ರಾಮದ ಸ್ಮಶಾನ ಜಾಗಕ್ಕೆ ನಿಗಧಿ ಮಾಡಿದ್ದ ಭೂಮಿಯನ್ನು ಕೆಲವರು ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡು ಸ್ಮಾಶನಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ್ವಯ ಇಂದು ಸ್ಥಳ ಪರೀಶಿಲನೆ ನಡೆಸಿ ಅಕ್ರಮ ಒತ್ತುವರಿ ಜಾಗವನ್ನು ತೆರವುಗೊಳಿಸಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕಿನ ಜುಂಜರಗುAಟೆ ಗ್ರಾಮದ ಸರ್ವೇ ನಂಬರ್ 35 ರಲ್ಲಿ4.15 ಎಕರೆಯ ಸ್ಮಶಾನ ಭೂಮಿಯ ವಿವಾದವನ್ನು ಕೊನೆಗಾಣಿಸಲಾಗಿದೆ.
ಸ್ಮಶಾನವನ್ನು ಕೆಲವರು ಒತ್ತುವರಿ ಮಾಡಿದ್ದು ಮತ್ತು ಓಡಾಡಲು ವ್ಯವಸ್ಥಿತ ದಾರಿ ಇಲ್ಲ ಎಂಬ ಕಾರಣಕ್ಕೆ ಸ್ಮಶಾನದ ವಿವಾದ ಉಂಟಾಗಿದ್ದು ಗ್ರಾಮಸ್ಥರು ತಾಲೂಕು ಕಚೇರಿಗೆ ಹೋಗಿ ಸ್ಮಶಾನದ ವಿವಾದವನ್ನು ಬಗೆಹರಿಸುವಂತೆ ಮನವಿ ನೀಡಿದ್ದರು.


ಇಂದು ತಾಲೂಕು ಸರ್ವೆರ್ ಮತ್ತು ಕಂದಾಯ ಸಿಬ್ಬಂದಿಯೊAದಿಗೆ ಸ್ಥಳಕ್ಕೆ ಆಗಮಿಸಿ ಒತ್ತುವರಿಯನ್ನು ತೆರೆವುಗೊಳಿಸಿ ಸದರಿ ಸ್ಮಶಾನಕ್ಕೆ 40 ಅಡಿ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಇದಕ್ಕೆ ಸಂಬAಧಿಸಿದAತೆ ಭೂ ಕಂದಾಯ ಕಾಯ್ದೆಯ ನಿಯಮ 71ರಂತೆ ಸಾರ್ವಜನಿಕ ರಸ್ತೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು
ಈ ಭಾಗದ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಮನವಿ ಮಾಡಿದರು ಸಂದರ್ಭದಲ್ಲಿ ಚೌಳೂರು ಪಂಚಾಯತಿ ಅಧ್ಯಕ್ಷ ಚಿಕ್ಕಣ್ಣ ಮತ್ತು ಎಲ್ಲಾ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು
ಪೋಟೋ : ಚಳ್ಳಕೆರೆ ತಾಲೂಕಿನ ಜುಂಜರಗುAಟೆ ಗ್ರಾಮದ ಸ್ಮಶಾನ ಭೂಮಿಯ ಒತ್ತುವಾರಿ ವಿವಾದವನ್ನು ಕೊನೆಗಾಣಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ

About The Author

Namma Challakere Local News
error: Content is protected !!