ಯುವ ಜನತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ
ಚಳ್ಳಕೆರೆ : ಇಂದಿನ ದಿನಮಾನಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವು ಒಂದು ದೊಡ್ಡ ಸವಾಲಾಗಿದೆ ಆದರೆ ಯುವ ಜನತೆ ಅದಕ್ಕೆ ತಕ್ಕಂತೆ ಶ್ರಮದಿಂದ ವ್ಯಾಸಂಗ ಹಾಗೂ ಕೌಶಲ್ಯಧಾರಿತ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಗೋಪಾಲರೆಡ್ಡಿ ಹೇಳಿದರು.
ಅವರು ಚಿತ್ರದುರ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜುನಲ್ಲಿ ಏರ್ಪಡಿಸಲಾಗಿದ್ದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪರವರ ನೇತೃತ್ವದಲ್ಲಿ ಕೌಶಲ್ಯ ಅಭಿಯಾನದ ಅಡಿಯಲ್ಲಿ ಯುವ ಸಬಲೀಕರಣ ಆಶಯದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ‘ಕೌಶಲ್ಯ ಕಾರ್ಯಗಾರ’ವನ್ನು ಉದ್ಘಾಟಿಸಿ ಮಾತನಾಡಿದರು,
ಕಾರ್ಯಗಾರದಲ್ಲಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಯೋಜನೆಗಳು, ಕೌಶಲ್ಯ ಆಧಾರಿತ ತರಬೇತಿ, ಉದ್ಯೋಗ ಅವಕಾಶಗಳು, ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ವಿಷಯಗಳ ಕುರಿತು ಸ್ಪೂರ್ತಿದಾಯಕ ಮಾಹಿತಿಗಳನ್ನು ನೀಡಲಾಯಿತು
ಈ ಕಾರ್ಯಾಗಾರದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಗೋಪಾಲರೆಡ್ಡಿ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳಾದ ಕಿಶೋರ್, ಉದ್ಯಮಶೀಲತಾ ಇಲಾಖೆಯ ತರಭೇತುದಾರರಾದ ವಿಜಯ್ ಕುಮಾರ್, ನಿವೃತ್ತ ಸೈನ್ಯ ಅಧಿಕಾರಿ ಗಣೇಶ್ ಬಾಲಕೃಷ್ಣ, ಯುಕ್ತ ಕೌಶಲ್ಯ ಸಂಸ್ಥೆ ವ್ಯವಸ್ಥಾಪಕರಾದ ದಿಲೀಪ್, ಕಾಲೇಜಿನ ಪ್ರಾಂಶುಪಾಲ ಡಾ. ರಂಗಪ್ಪ, ಫ್ರೊ. ಬಸವರಾಜು, ವಿನಯ್ ಗೋಡೆಮನೆ, ಗಿರಿಧರ್, ಉಲ್ಲಾಸ್, ಪರಶುರಾಮ್.ಎಂ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಸಂಪತ್‌ಕುಮಾರ್, ಲಕ್ಷ್ಮೀಕಾಂತ್, ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕ ಶಿವಮೂರ್ತಿ.ಟಿ ಕೋಡಿಹಳ್ಳಿ, ಬಸವರಾಜ್ ಇತತರು ಇದ್ದರು.
ಪೋಟೋ : ಚಿತ್ರದುರ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜುನಲ್ಲಿ ಏರ್ಪಡಿಸಲಾಗಿದ್ದ ಯುವ ಸಬಲೀಕರಣ ಆಶಯದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ‘ಕೌಶಲ್ಯ ಕಾರ್ಯಗಾರ’ವನ್ನು ಕಾರ್ಯಗಾರ