ಸರಕಾರಿ ನೌಕರಿ ಎಂಬ ಭ್ರಮೆ ಬೇಡ : ಪ್ರಾಂಶುಪಾಲ ನರಸಿಂಹಮೂರ್ತಿ

ಚಳ್ಳಕೆರೆ : ಆಧುನಿಕ ಬದುಕಿನಲ್ಲಿ ಇಂದಿನ ಮನುಷ್ಯನ ಜೀವನ ನಶಿಸಿಹೋಗುತ್ತದೆ ಎಂದು ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ ವಿಷಾಧ ವ್ಯಕ್ತಪಡಿಸಿದರು.


ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯನ ವಿಭಾಗದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಲ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಜಾಗತಿಕ ವಿದ್ಯಮಾನಗಳಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ತೀರ ಕಡಿಮೆಯಾಗುತ್ತದೆ, ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆAಗ್ಲ ಉಪನ್ಯಾಸಕ ವೀರಣ್ಣ ಮಾತನಾಡಿ, ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದುವ ಹವ್ಯಾಸ ಮಾಡಿಕೊಳ್ಳಿಬೇಡಿ ನಿರಂತರವಾಗಿ ಓದುವ ಹವ್ಯಾಸ ಮಾಡಿಕೊಳ್ಳಿ, ಇಂದಿನ ಸರಕಾರಗಳು ವ್ಯಾಸಂಗಕ್ಕೆ ಮುಕ್ತ ಅವಕಾಶ ನೀಡಬೇಕು, ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುವುದರ ಮೂಲಕ ಸರಕಾರ ಅವಕಾಶ ನೀಡಬೇಕಿದೆ ಎಂದರು.
ನಿವೃತ್ತ ಸಹ ಪ್ರಾಧ್ಯಾಪಕ ನಾಗರಾಜ್ ಮಾತನಾಡಿ, ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಪ್ರಥಮ ಎಂಎ ವಿದ್ಯಾರ್ಥಿಗಳಿಂದ ದ್ವಿತೀಯ ವಿದ್ಯಾರ್ಥಿಗಳಿಗೆ ನೀಡುವ ಬಿಲ್ಕೊಡುಗೆ ಸಮಾರಂಭ ಸಂತೋಷದಾಯಕ, ಇಂದಿನ ಸಾಮಾಜಿಕ ಮಾರುಕಟ್ಟೆ ತುಂಬಾ ವಿಭಿನ್ನವಾಗಿದೆ ಯುವ ಜನತೆ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳು ಮುಂಚೂಣಿಯಾಗಿರಬೇಕು ಎಂದರು.


ಸಮಾಜ ಶಾಸ್ತ್ರ ಪ್ರಾಧ್ಯಾಪಕ ಡಾ.ಸುರೇಶ್ ಮಾತನಾಡಿ, ಜಾಗತೀಕರಣ ಆಧುನಿಕರಣ, ಖಾಸಗೀಕರಣ ಈಡೀ ಜಗತ್ತಿನಲ್ಲಿ ತಾಂಡವಾಡುತ್ತಿದೆ, ಇಂದಿನ ಪರಸ್ಥಿತಿಯಲ್ಲಿ ಸರಕಾರಿ ನೌಕರಿ ಎಂಬುದು ಕನಸಿನ ಮಾತಾಗಿದೆ ಆದ್ದರಿಂದ ವೃತ್ತಿಪರವಾದ ಕೌಶಲ್ಯ ತರಬೇತಿ ಪಡಿಯುವುದು ಅನಿವಾರ್ಯ ಮುಂದೆ ಗುರಿಇರಬೇಕು, ಹಿಂದೆ ಗುರುವಿರಬೇಕು, ಆದಾಗ ಮಾತ್ರ ವಿದ್ಯಾರ್ಥಿಗಳು ಜೀವನ ಅಸನಾಗುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ರಘುನಾಥ್, ರವಿಕುಮಾರ್, ಮಾತನಾಡಿದರು ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ವಿಜಯ್ ಕುಮಾರ್, ರಮೇಶ್, ರಮೇಶ್ ಬಾಬು, ತಿಪ್ಪೇಸ್ವಾಮಿ,, ಚೈತ್ರಾ, ಪ್ರೇಮಾ, ಮಾಲಮ್ಮ, ಸಹರಬಾನು, ರಾಕೇಶ್, ಇತರರು ಪಾಲ್ಗೊಂಡಿದ್ದರು.


ಪೋಟೋ ಚಳ್ಳಕೆರೆ ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯನ ವಿಭಾಗದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಲ್ಕೋಡುಗೆ ಸಮಾರಂಭದಲ್ಲಿ ಪ್ರಾಂಶುಪಾಲ ನರಸಿಂಹಮೂರ್ತಿ ಮಾತನಾಡಿದರು.

Namma Challakere Local News
error: Content is protected !!