ಅಧಿವೇಶನದಲ್ಲಿ ಚರ್ಚಿಸುವಂತೆ ವಾಹನ ಚಾಲಕರಿಂದ ಶಾಸಕ ಟಿ.ರಘುಮೂರ್ತಿಗೆ ಮನವಿ

ಚಳ್ಳಕೆರೆ : ದಿನ ನಿತ್ಯದ ನಗರ ಸ್ವಚ್ಚತೆಗೆ ಕಾರಣ ಕರ್ತರಾದ ಪೌರಕಾರ್ಮಿಕರಂತೆ ನಗರಸಭೆ ವಾಹನಗಳನ್ನು ಚಾಲಾಯಿಸುವ ವಾಹನ ಚಾಲಕರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವಂತೆ ಅಧಿವೇಶನದಲ್ಲಿ ಗಮನ ಸೇಳೆಯಬೇಕು ಎಂದು ಚಳ್ಳಕೆರೆ ನಗರಸಭೆ ವಾಹನ ಚಾಲಕರು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಗೆ ದೂರವಾಣಿಯ ಮೂಲಕ ಮನವಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೌದು ಈಡೀ ನಗರವನ್ನು ಶುಚಿಯಾಗಿಡಲು ಪೌರಕಾರ್ಮಿಕರ ಜೊತೆಗೆ ಮುಂಜಾನೆಯ ತಮ್ಮ ಕಾಯಮ ನಿಷ್ಠೆ ಮೆರೆಯುವ ವಾಹನ ಚಾಲಕರಿಗೆ ಹೊರ ಗುತ್ತಿಗೆ ಎಂಬ ಅಸ್ತçವನ್ನು ಬಳಸಿ ಇಂದಿಗೂ ಕುಟುಂಬಗಳ ನಿರ್ವಣೆಗೆ ಸಾಲದ ಹಣಕಾಸಿನಲ್ಲಿ ಕನಿಷ್ಠ ಜೀವನ ಸಾಗಿಸುತ್ತಿದ್ದಾರೆ.


ಆದ್ದರಿಂದ ಈಡೀ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೆರ ಪಾವತಿಯಡಿ ಕೆಲಸ ಮಾಡುತ್ತಿದ್ದ 11.133 ಪೌರಕಾರ್ಮಿಕರನ್ನು ಖಾಯಂಗೊಳಿಸಿವುದಾಗಿ ಸಚಿವ ಸಂಪುಟ ನಿರ್ಣಯಿಸಿದೆ ಇದೇ ಮಾದರಿಯಲ್ಲಿ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿದೆ ಆಧಾರದಲ್ಲಿ ಕತ್ಯವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ ಚಾಲಕರನ್ನು, ವಾಟರ್‌ಮೆನ್ ಒಳಚರಂಡಿ ಕಾರ್ಮಿಕರನ್ನು, ಡಾಟಆಪರೇಟರ್‌ರುಗಳನ್ನು ನೇರಪಾವತಿಗೆ ಒಳಪಡಿಸದೆ ಕೈ ಬಿಟ್ಟಿರುವುದು ರಾಜ್ಯ ಸರಕಾರದ ತಾರತಮ್ಯದ ಕ್ರಮವಾಗಿದೆ
ಆದ್ದರಿಂದ ಈ ಬಾರಿ ಪೌರ ಕಾರ್ಮಿಕರಿಗೆ ಖಾಯಂಗೊಳ್ಳುವ ಅವಕಾಶ ನೀಡಲಾಗಿದೆ. ಈ ಸಂಧರ್ಭದಲ್ಲಿ ಇನ್ನೂಳಿದ ಹೊರಗುತ್ತಿದೆ ನೌಕರನ್ನು ಕಡೆಗಣಿಸದೆ ಅಧಿವೇಶನ ನಡೆಯುತ್ತಿರುವಾಗಳೆ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು, ಇದಕ್ಕಾಗಿ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಶಾಸಕರ ಭವನದಲ್ಲಿ ಶಾಸಕರ ಆಪ್ತಸಹಾಯಕ ಗುರುಸ್ವಾಮಿಗೆ ಮನವಿ ಪತ್ರ ನೀಡಿದ್ದಾರೆ.

ಈ ಸಂಧರ್ಭದಲ್ಲಿ ನಗರಸಭೆ ವಾಹನ ಚಾಲಕರಾದ ಟಿ.ಮಲ್ಲಿಕಾರ್ಜುನಾ, ಹರೀಪ್, ಮಹೇಶ್, ಪಾಪಣ್ಣ, ನಾಗರಾಜ್, ಬಸವ, ರಘು, ಪ್ರಭಾಕರ್, ರೇಹಮನ್, ಶ್ರೀನಿವಾಸ್, ಮಂಜುನಾಥ್, ತಿಪ್ಪೆಸ್ವಾಮಿ ಇತರು ಪಾಲ್ಗೋಡಿದ್ದರು.

ಪೋಟೋ ಚಳ್ಳಕೆರೆ ನಗರದ ಶಾಸಕ ಟಿ.ರಘುಮೂರ್ತಿ ಆಪ್ತ ಸಹಾಯಕ ಗುರುಸ್ವಾಮಿಗೆ ನಗರಸಭೆ ವಾಹನ ಚಾಲಕರು ಕುರಿತು ಶಾಸಕರು ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಸಲ್ಲಿಸಿದರು.

Namma Challakere Local News
error: Content is protected !!