ಮಕ್ಕಳ‌ ಕಳ್ಳರ ಬಗ್ಗೆ‌ ಪೊಲೀಸ್ ಇಲಾಖೆ‌ ಕ್ರಮ ಕೈಗೊಳ್ಳುವುದಾ..??

ಚಳ್ಳಕೆರೆ : ರಾಜ್ಯದಲ್ಲಿ ಮಕ್ಕಳ‌ಕಳ್ಳರ‌ ಬಗ್ಗೆ‌ ಹಬ್ಬಿರುವ ಸುದ್ಧಿ ಈಡೀ ರಾಜ್ಯದಲ್ಲಿ ಸಂಚಲನ ಮೂಡಿಸಿ‌ದೆ.

ಇನ್ನೂ ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ ಕಳ್ಳರ ಕೈಚಳಕದ ಜಾಡು ಹಿಡಿಯುವಲ್ಲಿ‌ ವಂಚು ಹಾಕಿ ಕಾಯುವ ಸಮಯದಲ್ಲಿ

ಮಕ್ಕಳ ಕಳ್ಳರೊಬ್ಬರು 7 ವರ್ಷದ ಮಗುವನ್ನು ಕದ್ದು ಹಳ್ಳಿ ಹೈದರ ಕೈಗೆ ಸಿಕ್ಕು ಪರಾರಿಯಾದ ಘಟನೆ ನಡೆದಿದೆ.

ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಬಟ್ಟೆ‌ ವ್ಯಾಪಾರಿ ಸೋಗಿನಲ್ಲಿ ಬಂದ ವ್ಯಾಪಾರಿಕ ಹಳ್ಳಿಯ ಏಳು ವರ್ಷದ ಮಗುವನ್ನು (ಗಗನ) ಕದ್ದು ಬೈಕ್ ನ ಬೆಡ್ ಶಿಟ್ ನೊಳಗಡೆ ಮಡಚಿಕೊಂಡು ಗ್ರಾಮದಿಂದ ಪಾಲಯಾನ ಮಾಡುವ ವೇಳೆ ಗ್ರಾಮದ ಯುವಕನ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಗ್ರಾಮದ ತಿಪ್ಪೇಸ್ವಾಮಿ ಹಾಗೂ ದೀಪಾ ಎಂಬುವರರ ಮಗುವು ಮನೆಯ‌ ಆವರಣದಲ್ಲಿ ಆಟ ಹಾಡುವಾಗ ವ್ಯಾಪಾರಿಕ ಮಗುವನ್ನು ಕದ್ದೋಯ್ದುದ್ದಾರೆ.

ಆದರೆ ಗ್ರಾಮದ ಯುವಕ
ಬೈಕ್ ನಿಲ್ಲಿಸಿದ ತಕ್ಷಣ ಮಗುವು ಬೈಕ್ ನಿಂದ ಕೆಳಗೆ ಜಾರಿ ಬಿದ್ದ ತಕ್ಷಣವೇ ಸ್ಥಳದಿಲ್ಲಿದ್ದ ಜನರಿಗೆ ಕಳ್ಳ ಎಂದು ಸಾಭಿತಾಗಿದೆ.

ತಕ್ಷಣವೇ ಹಿಗ್ಗಾ‌ಮುಗ್ಗಾ ತಳಿಸಿದ ಗ್ರಾಮಸ್ಥರು ಪೊಲೀಸ್ ರಿಗೆ ಒಪ್ಪಿಸಲು ತಡವಾಗಿದ್ದರಿಂದ ಸ್ಥಳದಲ್ಲಿ ಇದ್ದ ನಿವೃತ್ತಿ ಪೊಲೀಸ್ ಪೆದೆ ಯೊಬ್ಬರು ನಿಮ್ಮ ಒಡೆತಗಳಿಗೆ ಸತ್ತು ಹೋಗುತ್ತಾನೆ.

ಬಿಟ್ಟು ಬಿಡಿ‌ಸಿದ ತಕ್ಷಣ ಆಸಾಮಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ ಆದರೆ ಕಳ್ಳ ಮಾತ್ರ ಯಾವುದೇ ಸುಳಿವು ನೀಡದೆ ಪರಾರಿಯಾಗಿದ್ದಾನೆ.

ಇನ್ನೂ ಗ್ರಾಮದಲ್ಲಿ ಮಕ್ಕಳ‌ ಕಳ್ಳರ ಬಗ್ಗೆ ಆತಂಕ ಮನೆ ಮಾಡಿದೆ

ಈ ಬಗ್ಗೆ ಪೋಲಿಸ್ ರು ಮಕ್ಕಳ ಕಳ್ಳರ ಬಗ್ಗೆ ವ್ಯಾಪಕ ಪ್ರಚಾರ‌ ಪಡಿಸಿ ತಾಲೂಕಿನಲ್ಲಿ ಈ ಪ್ರಕರಣವನ್ನು ತನಿಖೆ ಮಾಡುವ ಮೂಲಕ ಕಾರ್ಯಪ್ರವೃತ್ತರಾಗಬೇಕಾದ ಅನಿವಾರ್ಯವಿದೆ..

About The Author

Namma Challakere Local News
error: Content is protected !!