ಅಂಗನವಾಡಿ ಕೇಂದ್ರದೊಳಗೆ ಬಿದ್ದ ಸಿಂಟಾಕ್ಸ್
ಪ್ರಾಣಪಾಯದಿಂದ ಪಾರಾದ ಮಕ್ಕಳು
ಚಳ್ಳಕೆರೆ : ತಾಲೂಕಿನ ಘಟಪರ್ತಿ ಗ್ರಾಪಂ ವ್ಯಾಪ್ತಿಯ ಹೊನ್ನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 2019-20ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸಲು ನಿರ್ಮಿಸಿದ ಸಿಂಟ್ಯಾಕ್ಸ್ ಒಂದು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇರುವಾಗಲೆ ಮೆಲ್ಚಾಚಾವಣೆ ಸೀಟು ಹೊಡೆದು ಕೇಂದ್ರದೊಳಗೆ ಸಿಂಟ್ಯಾಕ್ಸ್ ಬಿದ್ದಿರುವ ಘಟನೆ ನಡೆದಿದೆ.
ಆದರೆ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ, ಕುಡಿಯುವ ನೀರಿನ ಸಂಪರ್ಕ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿರುವುದು ಮೆಲ್ನೋಟಕ್ಕೆ ಕಂಡು ಬಂದಿದೆ.


ಸೀಮೆAಟ್ ಸೀಟ್ ಮೇಲೆ ಟ್ಯಾಂಕ್ ಕೂರಿಸಿದ್ದಾರೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇರುವಾಗಲೆ ಸಿಂಟಾಕ್ಸ್ ಕುಸಿದು ಮಕ್ಕಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಯದಿಂದ ಪಾರಾಗಿದ್ದಾರೆ ಇದೇ ರೀತಿ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಕಾಮಗಾರಿಗಳನ್ನು ಮಾಡಿದ್ದಾರೆ ಇದರಿಂದ ಇನ್ನೂಳಿದ ಅಂಗನಾಡಿ ಕೇಂದ್ರಗಳಿಗೆ ಪೋಷಕರು ಮಕ್ಕಳನ್ನು ಕಳಿಸಲು ಆತಂಕದಲ್ಲಿದ್ದಾರೆ

ನೀರಿನ ತೊಟ್ಟಿ, ಸಿಂಟೆಕ್ ಹಾಗೂ ಪೈಪ್ ಲೈನ್ ಮಾಡಿ ಶುದ್ದ ಕುಡಿಯುವ ನೀರಿನ ಪಿಲ್ಟರ್ ನೀಡಲಾಗಿದೆ ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

About The Author

Namma Challakere Local News
error: Content is protected !!