ಬ್ಲಾಕ್ ಮೇಲ್ ತಂತ್ರ ಕಾಂಗ್ರೇಸ್‌ಗೆ ಗೊತ್ತಿಲ್ಲ
ಕಾಂಗ್ರೇಸ್‌ಗೆ ಹೋರಾಟ ಮಾತ್ರ ಗೊತ್ತು,
ಬಿಜೆಪಿಗರಿಗೆ ತಂತ್ರ-ಕುತAತ್ರಗಳು ಎರಡು ಗೊತ್ತಿವೆ
ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಕಿಡಿ
ಶಾಸಕರ ಬಗ್ಗೆ ಅಪಮಾನ ಶೋಭೆ ತರತಕ್ಕುದಲ್ಲ.


ಚಳ್ಳಕೆರೆ : ಈಡೀ ದೇಶದಲ್ಲಿ 40ರಷ್ಟು ಕಮಿಷನ್ ಪಡೆಯುವ ಸರಕಾರ ಯಾವುದು ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ ಆದರೆ ಆಧಾರ ರಹಿತವಾಗಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹಾಗೂ ಜಯಪಾಲಯ್ಯ ಸ್ಥಳಿಯ ಶಾಸಕರ ಬಗ್ಗೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಕಿಡಿಕಾರಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪ್ರತಿಕಾ ಗೊಷ್ಠಿಯಲ್ಲಿ ಮಾತನಾಡಿದ ಅವರು ಸುಖಾ ಸುಮ್ಮನೆ ಶಾಸಕರ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡುವುದು ರಾಜಾಕೀಯ ಬೆಳೆ ಬೆಯಿಸಿಕೊಳ್ಳುವುದು ಬೇಡ, ಕ್ಷೇತ್ರದ ಜನತೆಗೆ ಗೊತ್ತಿದೆ ಶಾಸಕರ ಅಭಿವೃದ್ದಿ ಕಾರ್ಯಗಳು ಏನು ಎಂಬುದು, ಕ್ಷೇತ್ರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಸ್ಥಳೀಯ ಶಾಸಕರ ವಿರುದ್ಧ ಅಪಮಾನ ಮಾಡುವ ದುರುದ್ಧೇಶದಿಂದ ಆಧಾರ ರಹಿತವಾದ ಹೇಳಿಕೆ ಸರಿಯಲ್ಲ,

ಕಳೆದ ಜಿಲ್ಲಾ ಪಂಚಾಯಿತ್ ಚುನಾವಣೆಯಲ್ಲಿ ಹೆಂಡತಿ ಹೆಸರಲ್ಲಿ ಹಲವು ಕಾಮಗಾರಿಗಳಲ್ಲಿ ಕಮಿಷನ್ ಪಡೆಯುವುದು ಎಲ್ಲಾ ಜನತೆಗೆ ಗೊತ್ತಿದೆ, ರೈತರ ಭೂಮಿಯನ್ನು ಸೋಲಾರ್‌ಗಾಗಿ ಕಬಳಿಸುವ ಇವರು ಇದುವರೆಗೆ ರೈತರಿಗೆ ಪರಿಹಾರ ನೀಡಿಲ್ಲ, ಬ್ಲಾಕ್ ಮೇಲ್ ತಂತ್ರ ಕಾಂಗ್ರೇಸ್‌ಗೆ ಗೊತ್ತಿಲ್ಲ ಕೇವಲ ಹೋರಾಟ ಮಾತ್ರ ಗೊತ್ತು, ಏನೇ ಇದ್ದರು ಬಿಜೆಪಿಗರಿಗೆ ಈ ಎಲ್ಲಾ ತಂತ್ರ ಕುತಂತ್ರಗಳು ಗೊತ್ತಿವೆ, ಕಳೆದ 9ವರ್ಷದಲ್ಲಿ ಸ್ಥಳೀಯ ಕ್ಷೇತ್ರದ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಇರದನ್ನು ಸಹಿಸಲಾದರೆ ಈರೀತಿ ಆರೋಪ ಮಾಡಿದ್ದುತಿದ್ದಾರೆ, ಒಬ್ಬ ಪರಿಶಿಷ್ಟ ಜಾತಿಯ ಪೊಲೀಸ್ ಅಧಿಕಾರಿ ಮೇಲೆ ದರ್ಪ ತೋರಿಸಿ ಅವಾಚ್ಚ ಶಬ್ದಗಳಿಂದ ನಿಂಧಿಸಿದ ಇವರು ಶಾಸಕರ ಮೇಲೆ ಎಳೆಯುತ್ತಿದ್ದಾರೆ

ಪ್ರಮಾಣ ವಚನಕ್ಕೆ ಕರೆದಾಕ್ಷ್ಷಣ ಹೋಗುವವರಲ್ಲ :

ನಾನು ಎಷ್ಟು ಪ್ರಮಾಣಿಕ ಎಂಬುದು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು, ಸಂಸದ ನಾರಾಯಣಸ್ವಾಮಿ ರವರ ಅನುದಾನದಲ್ಲಿ ಎಷ್ಟು ಕಮಿಷನ್ ಪಡೆದಿದ್ದಾರೆ ಎಂಬುದು ಮೊದಲು ಅದೇ ಕೊಲ್ಲಾಪುರದಮ್ಮ ದೇವಿ ಮುಂದೆ ಪ್ರಮಾಣ ವಚನ ಮಾಡಲಿ ಅದನ್ನು ಬಿಟ್ಟು ಶಾಸಕರ ಮೇಲೆ ಆರೋಪ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಕಾಂಗ್ರೇಸ್ ಮುಖಂಡ ಪೂಜಾರಿ ಪರಸಪ್ಪ ಮಾತನಾಡಿ, ಬಿಜೆಪಿ ಸರಕಾರ 40 ರಷ್ಟು ಕಮಿಷನ್ ಪಡೆಯುವ ಸರಕಾರ ಎಂದು ಅವರ ಶಾಸಕರೇ ಪತ್ರ ಬರೆದಿದ್ದಾರೆ ಇವರು ಸುಳ್ಳು ಆರೋಪಗಳಿಗೆ ನಾವು ಬಗ್ಗುವರಲ್ಲ, ರೈತರ ಬಜೆಟ್ ಎಂದು ಇವರು ಹಲವಾರು ಕಳಂಕ ಹೊತ್ತು ಸರಕಾರ ನಡೆಸುತ್ತಿದ್ದಾರೆ ಎಂದು ಆಡಳಿತ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ.


ಈದೇ ಸಂಧರ್ಭದಲ್ಲಿ ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ಕಾಂಗ್ರೇಸ್ ಮುಖಂಡ ಪ್ರಭುದೇವ್, ಪೂಜಾರಿ ಪರಸಪ್ಪ, ಚನ್ನಕೇಶವ, ಕಿಸಾನ್ ಸಂಘದ ಜಿಲ್ಲಾಅಧ್ಯಕ್ಷ ನಾಗರಾಜ್, ಸೈಯದ್, ಅಲ್ಪ ಸಂಖ್ಯಾತರÀ ಅಧ್ಯಕ್ಷ ಅನ್ವರ್‌ಮೇಷ್ಟುç, ನನ್ನಿವಾಳ ಬಸವಾರಾಜ್, ರಾಜಣ್ಣ, ಇತರರು ಇದ್ದರು.

Namma Challakere Local News
error: Content is protected !!