ಹೊಯ್ಸಳ ಬ್ಯಾಂಕ್ ಕಟ್ಟಡ ವಿವಾದ : ಎರಡು ಬಾರಿ ಸಭೆ ಮುಂದೂಡಿಕೆ
ಕೋರA ಇಲ್ಲ ಎಂಬ ಅಧ್ಯಕ್ಷರ ಉತ್ತರ
ಚಳ್ಳಕೆರೆ : ನಗರಸಭೆ ಅಧಿಕಾರದ ಗದ್ದುಗೆ ಹೇರಿದ ಕಾಂಗ್ರೇಸ್ ಪಕ್ಷದ ಬಹು ಸ್ಥಾನಗಳಿಂದ ಇಡೀ ನಗರಸಭೆ ಚುಕ್ಕಾಣಿ ಹಿಡಿದ ಸದಸ್ಯರಲ್ಲಿ ಹೊಂದಾಣಿಕೆ ಕೊರತೆಯಿಂದ ಸ್ಥಳೀಯ ವಿರೋಧ ಪಕ್ಷದ ಬಾಯಿಗೆ ಬಲಿಯಾಗಿದ್ದಾರೆ.
ಹೌದು ನಗರಸಭೆ ಸಾಮಾನ್ಯ ಕೌನ್ಸಿಲ್ ಸಭೆ ಕಳೆದ ಸೆ.12 ರಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ರವರ ಅಧ್ಯಕ್ಷತೆಯ್ಲಲಿ ಸಭೆ ಕರೆಯಲಾಗಿತ್ತು ಆದರೆ ಮಾರಮ್ಮ ಹಬ್ಬವಿದೆ ಎಂಬ ನೆಪ ಹೊಡ್ಡಿ ಮುಂದೂಡಲಾಗಿತ್ತು,
ನಂತರ ಸಭೆ ಸೆ.19ರಂದು ಸಾಮಾನ್ಯ ಸಭೆ ನಡೆಯಲು ಸಭೆಗೆ ಬಂದ ಸುಮಾರು 14ಜನ ಸದಸ್ಯರ ಕೋರಂ ಇದ್ದರು ಕೂಡ ಸಭೆಗೆ ಕೂರದೆ, ಸಭೆ ಪ್ರಾರಂಭಗೊಳ್ಳದೆ ಇರುವುದರಿಂದ ಸಭೆ ಮುಂದುಡಲಾಯಿತು.
ಸಭೆ ಮುಂದೂಡಲು ತೆರೆಮೆರೆಯಲ್ಲಿ ಕಸರತ್ತು ನಡೆಸುತ್ತಿವೆ, ಇನ್ನೂ ಕಳೆದ ಸಭೆಯಲ್ಲಿ ಈಡೀ ಸಭೆಯನ್ನು ತೀಕ್ಷಾ÷್ಣವಾಗಿ ಕಾಡುವ ಹೊಯ್ಸಳ ಬ್ಯಾಂಕ್ ಕಟ್ಟಡ ಇಡೀ ಸಭೆಯಲ್ಲಿ ದೊಡ್ಡ ಸದ್ದು ಮಾಡುವ ಉದ್ದೇಶದಿಂದ ಕೆಲ ಸದಸ್ಯರ ಹೊಂದಾಣಿಕೆ ರಾಜಾಕೀಯ ಕೂಡ ಎದ್ದುಕಾಣುವುದರಿಂದ ಇಲ್ಲಿ ಸಭೆ ಮುಂದೂಡುತ್ತಿವೆ ಎನ್ನುವ ಸಾರ್ವಜನಿಕರ ಆರೋಪ ಕೂಡ ಬಲವಾಗಿದೆ.


ಕ್ಷೇತ್ರದ ತುಂಬೆಲ್ಲಾ ಮಳೆರಾಯನ ಕೃಪೆಯಿಂದ ಇಡೀ ತಾಲೂಕು ಹಸಿರಾಗಿದೆ ಆದೇ ರೀತಿಯಲ್ಲಿ ನಗರದ ಜೀವನಾಡಿಯಾದ ಅಜ್ಜಯ್ಯನ ಗುಡಿಕೆರೆ ಕೋಡಿ ಬಿದ್ದ ನೀರು ನಗರದ ರಹಿಂ ನಗರದ ಮೂಲಕ ಹಾದು ಹೊಗಬೇಕು, ಇನ್ನೂ ಸ್ಲಂ ವಾರ್ಡ್ಗಳ ದುಸ್ಥಿತಿ ಹೇಳತೀರದು, ಈಗೀರುವಾಗ ಎರಡು ಬಾರಿ ಸಭೆ ಮುಂದೂಡುವುದು ಯಾವ ಪುರರ್ಷತಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಬಿಜೆಪಿ ನಾಮನಿರ್ದೇಶಕ ಸದಸ್ಯರಾದ ಇಂದ್ರೇಶ್, ಮನೋಜ್, ಪಾಲನೇತ್ರ,ವೀರೇಶ್, ನಗರಸಭೆಗೆ ಸೇರಿದ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಟ್ರಸ್ಟ್ (ರಿ) (ಹೊಯ್ಸಳ ಬ್ಯಾಂಕ್) ಕಟ್ಟಡವನ್ನು ಕಾರ್ಯಾಲಯದ ಸುಪರ್ದಿಗೆ ಪಡೆಯುವಂತೆ ಆಡಳೀತ ಪಕ್ಷದ ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ನಕುಮಾರ್ ರವರು ಪತ್ರ ನೀಡಿರುವ ಮನವಿಯಂತೆ ಹಾಗೂ ಸಭೆಗೆ ತಂದ ಕಾರಣ ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರಾಗಿ ಸಭೆ ಮುಂದೂಡಲು ಕಾರಣವಾಗಿದೆ ಎಂದು ಸದಸ್ಯ ಜಯಣ್ಣ ಆರೋಪಿಸಿದ್ದಾನೆ.

About The Author

Namma Challakere Local News
error: Content is protected !!