ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಹಕಾರ

ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿರುವ ಬಡ ಜನರಿಗೆ ಶ್ರೀ ಧರ್ಮಸ್ಥಳ ಸಂಘವು ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಹಕಾರ ನೀಡಿದೆ ಎಂದು ಸಮನ್ವಯ ಅಧಿಕಾರಿ ಹೇಮಲತಾ ಹೇಳಿದ್ದಾರೆ.


ಅವರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿಯ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸಹಯೋಗದಲ್ಲಿ ದಾವಣಗೆರೆಯ ಶೃತಿ ಕಲಾತಂಡ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಭಾಗವಹಿಸಿ ಮಾತನಾಡಿದ್ದಾರೆ .
ಗ್ರಾಮೀಣ ಪ್ರದೇಶದ ಜನರಿಗೆ ಯಾವುದೇ ರೀತಿಯ ಆರೋಗ್ಯದ ತೊಂದರೆಗಳು ಆಗದಂತೆ ಜಾಗೃತಿ ವಹಿಸಲು ಬೀದಿ ನಾಟಕಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ವತಿಯಿಂದ ಜಾಗೃತಿ ಮೂಡಿಸಲಾಯಿತು ಎಂದು ಸಮನ್ವಯ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.

ಈ ವೇಳೆ ಪತ್ರಕರ್ತ ಕೆ ಟಿ ಓಬಳೇಶ್ ನಲಗೇತನಹಟ್ಟಿ ರವರು ಮಾತನಾಡಿ ಕಳೆದ ಎರಡು ವರ್ಷದಿಂದ ಕರೋನ ಮಹಾಮಾರಿ ಇಡೀ ಜಗತ್ತಲ್ಲಿ ತಲ್ಲನಗೊಳಿಸಿದೆ ಇಂತಹ ಸಂದರ್ಭಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನತೆಗೆ ಜಾಗೃತಿ ಮೂಡಿಸುವುದು ತುಂಬಾ ಸಂತೋಷದ ವಿಷಯ ಎಂದು ಪತ್ರಕರ್ತ ಕೆ ಟಿ ಓಬಳೇಶ್ ನಲಗೇತನಹಟ್ಟಿ ರವರು ಹೇಳಿದ್ದಾರೆ .


ನಂತರ ಸೇವಾ ಪ್ರತಿನಿಧಿ ಅಶ್ವಿನಿ ಮಾತನಾಡಿ ಇಂದು ಗ್ರಾಮದಲ್ಲಿ ದಾವಣಗೆರೆ ಶೃತಿ ಕಲಾ ತಂಡವು ಬೀದಿ ನಾಟಕದ ಮುಖಾಂತರ ಸ್ವಚ್ಛತೆಯ ಬಗ್ಗೆ ಸಾಂಕ್ರಾಮಿಕ ರೋಗಗಳು ಮಹಿಳಾ ಸಹಾಯ ಸಂಘಗಳ ಬಗ್ಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಹೋಬಳಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ. ಮೇಲ್ವಿಚಾರಕರು ಸಂತೋಷ್ ಗ್ರಾಮದ ಗ್ರಾಮಸ್ಥರಾದ ತಿಪ್ಪೇಶ್ ಸಂಘದ ಮಹಿಳಾ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು

Namma Challakere Local News
error: Content is protected !!