ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ಗಣೇಶೋತ್ಸವ : ಬಿಜೆಪಿ ಯುವ ಮುಖಂಡ ಪಿಒ.ತಿಪ್ಪೇಸ್ವಾಮಿ

ನಾಯಕನಹಟ್ಟಿ: ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ ಗಣೇಶೋತ್ಸವ ಕಳೆದ ಎರಡು ವರ್ಷದಿಂದ ದಾಸರಮುತ್ತೇನಹಳ್ಳಿ ಕಂಚಿನ ಕೋಟೆ ಯುವ ವಿನಾಯಕ ಬಳಗ ದಿಂದ ಗಣೇಶ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಪಿ ಒ ತಿಪ್ಪೇಸ್ವಾಮಿ ಹೇಳಿದ್ದಾರೆ .


ಅವರು ಹೋಬಳಿಯ ದಾಸರಮುತ್ತೇನಹಳ್ಳಿ ಕಂಚಿನ ಕೋಟೆ ಯುವ ವಿನಾಯಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಕಳೆದ ಬಾರಿ ಗಣೇಶ ಉತ್ಸವವನ್ನು ಕೋವಿಡ್ ಕಾರಣದಿಂದ ಆಚರಿಸಲು ಆಗಲಿಲ್ಲ ಗ್ರಾಮದಲ್ಲಿ ಶಾಂತಿ ಸುವಸ್ಥೆಯನ್ನು ಕಾಪಾಡುತ್ತಾ ಗಣೇಶನ ಆಶೀರ್ವಾದ ಸದಾಕಾಲ ಇರಲಿ ಎಂದು ಯುವ ಮುಖಂಡ ಪಿ ಓ ತಿಪ್ಪೇಸ್ವಾಮಿ ಶುಭ ಹಾರೈಸಿದರು.


ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ವೈ ಎಸ್ ಗೋವಿಂದ ರಾಜ್ ಮಾತನಾಡಿ
ಗಣೇಶನ ಚತುರ್ಥಿ ದಿನದಿಂದ ಸುಮಾರು ಐದು ದಿನಗಳ ಕಾಲ ಗ್ರಾಮದ ಬಯಲು ರಂಗಮAದಿರದ ಆವರಣದಲ್ಲಿ ಗಣೇಶನ ಪ್ರತಿಷ್ಠಾಪಿಸಲಾಯಿತು.


ಇದು ಮಧ್ಯಾಹ್ನ 2 ಗಂಟೆಯಿAದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮೆರವಣಿಗೆ ಶ್ರೀ ವಿಘ್ನ ವಿನಾಯಕನಿಗೆ ಭಕ್ತಿ ಸಮರ್ಥಿಸಿ ವಿಸರ್ಜನೆ ಅನುವು ಮಾಡಲಾಯಿತು.

ಸಂಜೆ ವೇಳೆಗೆ ಗಣೇಶನ ಮೂರ್ತಿಯನ್ನು ವಿಸರ್ಜನೆಯ ಹಿರೆಕೆರೆಯ ದೊಡ್ಡ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೈ ಎಸ್ ಗೋವಿಂದ ರಾಜ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜಯ್ಯ, ಎಲ್ಐಸಿ ಬೋರಯ್ಯ,, ಊರಿನ ಪ್ರಮುಖರಾದ ಕುಂಟೆ ಸೂರಯ್ಯ,ದಾಣಿ ಓಬಯ್ಯ, ಸಂಪತ್ ಕುಮಾರ್, ಎಲ್ಐಸಿ ಓಬಣ್ಣ, ಪಟೀಲ್ ಈಶ್ವರ್ ನಾಯಕ, ಬಿ ಓಬಣ್ಣ, ದೊಡ್ಡಯ್ಯ, ಎಸ್ ಪಾಲಯ್ಯ, ಅಜ್ಜಯ್ಯ, ಮೂಗನಾರು ತಮ್ಮಯ್ಯ, ಎಸ್ ಬಿ ಬೋರಯ್ಯ, ಟಿ ಬಿ ಬೋರಯ್ಯ ಅಜಯ್ ಚಕ್ರವರ್ತಿ, ಡಿ ಪಿ ಮಂಜುನಾಥ್, ಎಸ್ ಪಿ ತಮ್ಮಯ್ಯ, ಹಾಗೂ ದಾಸರ ಮುತ್ತೇನಹಳ್ಳಿಯ ಸಮಸ್ತ ಗ್ರಾಮಸ್ಥರು

Namma Challakere Local News
error: Content is protected !!